60 ವರ್ಷದ ವೃದ್ದನಿಗೆ 20 ವರ್ಷ ಯುವತಿಯಿಂದ ದೋಖಾ? ಆನ್ ಲೈನ್ ನಲ್ಲಿಯೇ ಹಣ ವಸೂಲಿ

0
Spread the love

ಮಂಡ್ಯ: 60 ವರ್ಷದ ವೃದ್ದನಿಗೆ 20 ವರ್ಷ ಯುವತಿಯಿಂದ ದೋಖಾ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಾಟ್ಸ್ ಅಪ್ ನಲ್ಲಿ ಚಾಟಿಂಗ್ ಮಾಡಿ ಆನ್ ಲೈನ್ ನಲ್ಲಿಯೇ ಹಣ ವಸೂಲಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಜಯಕಮಾರ್ ಹಣ ಕಳೆದುಕೊಂಡ ವೃದ್ದನಾಗಿದ್ದು, ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್ ಗೆ ಫೇಸ್ ಬುಕ್ ನಲ್ಲಿ ಯುವತಿ ಪರಿಚಯವಾಗಿದೆ.

Advertisement

ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಳಿಕ ಇಬ್ಬರ ನಡುವೆ ಆತ್ಮೀಯ ಬೆಲೇದಿದ್ದು, ಯುವತಿ ಹಲವು ಕಾರಣ ಹೇಳಿ ಆಗಾಗ ಹಣ ಕೇಳಿ ಪೋನ್ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಳು. ಹಲವು ಬಾರಿ ಸಿಗುವುದಾಗಿ ಹೇಳಿ ವಂಚಿಸಿದ್ದಾಳೆ. ಯುವತಿಯು ಸಿಗದೇ, ಹಣ ವಾಪಸ್ಸು ಬರದೇ ಕಂಗಾಲಾದ ವೃದ್ದ ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here