ಹಾಸನ:- ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಕಾಡಾನೆಯೊಂದು ವೃದ್ಧನ ಮೇಲೆ ಏಕಾಏಕಿ ದಾಳಿ ನಡೆಸಿ ಕೊಂದು, ಶವದ ಮೇಲೆ ಕಾಫಿ ಗಿಡ ಮುಚ್ಚಿದ ಘಟನೆ ಜರುಗಿದೆ.
Advertisement
78 ವರ್ಷದ ಪುಟ್ಟಯ್ಯ ಮೃತ ವೃದ್ಧ. ಮಂಗಳವಾರ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ. ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿದೆ. ಇದರಿಂದ ವೃದ್ಧ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬಳಿಕ ಆನೆ ಶವಕ್ಕೆ ಕಾಫಿ ಗಿಡಗಳನ್ನು ಮುಚ್ಚಿ ಹೋಗಿದೆ. ಇಂದು ಮುಂಜಾನೆ ಕಾಫಿ ತೋಟದಲ್ಲಿ ಪುಟ್ಟಯ್ಯ ಶವ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.