ಶಿವಮೊಗ್ಗ: ಹೊಟ್ಟೆ ನೋವಿನ ಕಾರಣಕ್ಕೆ ಶಾಲೆಗೆ ರಜೆ ಹಾಕಿದ್ದ ಬಾಲಕಿ ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಸರಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
Advertisement
ಕಳೆದ ಎರಡು ದಿನಗಳಿಂದ ಹೊಟ್ಟೆ ನೋವಿನ ಕಾರಣದಿಂದ ಶಾಲೆಗೆ ರಜೆ ತೆಗೆದುಕೊಂಡಿದ್ದಳು. ಆಕೆಯ ಕುಟುಂಬಕ್ಕೆ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದ ವಿಷಯ ತಿಳಿದಿರಲಿಲ್ಲ. ಆದರೆ ಆಗಸ್ಟ್ 30, 2025ರಂದು, ಬಾಲಕಿಯು ಮನೆಯಲ್ಲಿ 1.8 ಕೆ.ಜಿ. ತೂಕದ ಏಳು ತಿಂಗಳ ಗಂಡು ಮಗುವಿಗೆ ಜನ್ಮ ನೀಡಿದಳು.
ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಮತ್ತು ನವಜಾತ ಶಿಶುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳ ವಾರ್ಡ್ನಲ್ಲಿ ಮಗುವನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


