ಹಾವೇರಿ:- ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ 1.5 ಲಕ್ಷ ಮೌಲ್ಯದ ಬ್ಯಾರೇಜ್ ಗೇಟ್‌ಗಳನ್ನ ಕಳ್ಳರ ಗ್ಯಾಂಗೊಂದು ಕಳ್ಳತನ ಮಾಡಿರುವ ಘಟನೆ ಹಾವೇರಿಯಲ್ಲಿ ಜರುಗಿದೆ.
Advertisement
ನಿರಂತರವಾಗಿ ಕಳೆದ 8 ತಿಂಗಳಿನಿಂದ ಮಳೆಯಾಗಿದೆ. ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಬ್ರಿಜ್ಡ್ ಕಂ ಬ್ಯಾರೇಜ್‌ಗೆ ಅಳವಡಿಸಿದ್ದ ಗೇಟ್‌ಗಳನ್ನು ಗೋದಾಮಿನಲ್ಲಿ ಇಡುತ್ತಾರೆ. ಆದರೆ ಈಗ ಖದೀಮರ ಗ್ಯಾಂಗ್ ರಾತ್ರೋರಾತ್ರಿ 98 ಗೇಟ್‌ಗಳನ್ನು ಕಳ್ಳತನ ಮಾಡಿದೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ಗೇಟ್‌ಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಜಿಲ್ಲೆಯಲ್ಲಿ ಐದಾರು ಬ್ರಿಜ್ಡ್ ಕಂ ಬ್ಯಾರೇಜ್‌ಗಳ ಗೇಟ್‌ಗಳನ್ನು ಕಳ್ಳತನ ಮಾಡಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಹಿಂಗಾರು ಬೆಳೆಗಳನ್ನ ಬೆಳೆಯುವುದು ಹೇಗೆ. ಕಳ್ಳತನವಾಗಿ ಎರಡು ತಿಂಗಳು ಕಳೆದರೂ ಕಳ್ಳರು ಮಾತ್ರ ಪತ್ತೆಯಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.