ಕ್ರೀಡಾ ಸಾಧನೆಯಿಂದ ಉತ್ತಮ ಭವಿಷ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಭವಿಷ್ಯ ಹೊಂದಲು ಸಾಧ್ಯವಿದೆ ಎಂದು ಕುರ್ತಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪಣ್ಣ ಇನಾಮತಿ ಹೇಳಿದರು.

Advertisement

ಅವರು ಕುರ್ತಕೋಟಿ ಗ್ರಾಮದ ಹುಲಕೋಟಿ ಶಿಕ್ಷಣ ಸಮಿತಿಯ ಅಮರಪ್ಪ ಇನಾಮತಿ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಕ್ರಿಡಾಕೂಟ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದಲ್ಲಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ನಿತ್ಯ ಭಾಗವಹಿಸಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಗ್ರಾಮೀಣ ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವುದರಿಂದ ಉತ್ತಮ ಉದ್ಯೋಗಗಳು ನಿಮ್ಮನ್ನು ಅರಸಿ ಬರುತ್ತವೆ ಎಂದರು.

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ವಿ. ಪಾಟೀಲ, ಆರ್.ಎಸ್. ಕರಿಗೌಡರ, ಜಿ.ಎನ್. ಪಾಟೀಲ, ಅಶೋಕ ಶಿರಹಟ್ಟಿ, ಹನಮಂತಪ್ಪ ಹಾದಿಮನಿ, ರಜಿಯಾಬೇಗಂ ನಲವಡಿ, ಮಲಕಾಜಪ್ಪ ಹೊಸಮನಿ, ಈರಪ್ಪ ತಿಪ್ಪಣ್ಣವರ, ಶೇಖರಯ್ಯ ಹೊಸಮಠ, ವೆಂಕರೆಡ್ಡಿ ಹೊಸಮನಿ, ಮುಖ್ಯೋಪಾಧ್ಯಾಯ ಜಂಭುನಾಥ ಹರಿವಾಣ, ದೈಹಿಕ ಶಿಕ್ಷಕ ಎಂ.ಎಚ್. ಅಂಗಡಿ, ಅವಿನಾಶ ಬೆಟಗೇರಿ, ಬಕ್ಷಿ ತಹಸೀಲ್ದಾರ, ರಾಘವೇಂದ್ರ ಕೋಳಿವಾಡ, ಯಲ್ಲಪ್ಪ ಬೇವಿನಮರದ, ವಿರೂಪಾಕ್ಷಪ್ಪ ಕಿಚಡಿ ಇದ್ದರು.


Spread the love

LEAVE A REPLY

Please enter your comment!
Please enter your name here