ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಟಿಸಿರುವ ‘ಕೂಲಿ’ ಸಿನಿಮಾಗೆ ಎ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದ್ದು ತೆರೆಗೆ ಬರಲು ಸಜ್ಜಾಗಿದೆ. ಇದೇ ಆಗಸ್ಟ್ 14ರಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ದಾರೆ. ಈ ಮಧ್ಯೆ ಸಿನಿ ಪ್ರೇಕ್ಷಕರಿಗೆ ಭಾರಿ ನಿರಾಸೆಯಾಗಿದ್ದು ಸಿನಿಮಾದ ಟಿಕೇಟ್ ಧರ ಗಗನಕ್ಕೇರಿದೆ. 2000 ರೂಪಾಯಿ ಗೆ ಕೂಲಿ ಸಿನಿಮಾದ ಟಿಕೇಟ್ ದರ ಹೆಚ್ಚಿಸಲಾಗಿದೆ.
ರಜನಿಕಾಂತ್ ಸಿನಿಮಾಗಳು ಅಂದ್ರೆ ನಿರೀಕ್ಷೆ ದುಪ್ಪಟಾಗಿಯೇ ಇರುತ್ತೆ. ಈ ಬಾರಿ ಅದು ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ ಸದ್ಯ ರಿಲೀಸ್ ಗೆ ರೆಡಿಯಾಗಿರುವ ‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ವಿರುದ್ಧ ನೆಗಟಿವ್ ಶೇಡ್‌ನಲ್ಲಿ ತಲುಗಿನ ಸ್ಟಾರ್ ನಟ ನಾಗಾರ್ಜುನ್ ಅಕ್ಕಿನೇನಿ ಅಬ್ಬರಿಸಿದ್ದಾರೆ. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್‌ನ ಅಮೀರ್ ಖಾನ್ ಸೇರಿದಂತೆ ಬಹುತಾರಾಗಣವೇ ಇದರಲ್ಲಿದೆ. ಲೋಕೇಶ್ ಕನಗರಾಜ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಕೂಲಿ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಸಿನಿಮಾ ಯಾವಾಗ ನೋಡ್ತಿವಿ ಎಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.
ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 200 ರೂಪಾಯಿಗೆ ಮಿತಿ ನಿಗದಿ ಮಾಡಿದ ಸರ್ಕಾರ ಕರಡು ನಿಯಮ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿದೆ. ಈ ಮಧ್ಯೆ ರಿಲೀಸ್ ಆಗಲಿರುವ ‘ಕೂಲಿ’ ಸಿನಿಮಾ ಟಿಕೆಟ್ 2000 ರೂಪಾಯಿ ಮಾರಾಟವಾಗಿದೆ. ಬೆಂಗಳೂರಿನಲ್ಲಿ ಇಷ್ಟೊಂದು ದುಬಾರಿ ಬೆಲೆಗೆ ಟಿಕೆಟ್ ಮಾರಾಟವಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಅಂದು ಬೆಳಗ್ಗೆ 06 ಗಂಟೆಯಿಂದಲೇ ಚಿತ್ರ ಪ್ರದರ್ಶನಗಳು ಶುರುವಾಗಲಿವೆ.
ಬೆಂಗಳೂರಿನ ಎಂ.ಜಿ ರಸ್ತೆಯ ಸ್ವಾಗತ್ ಶಂಕರ್‌ನಾಗ್ ಚಿತ್ರಮಂದಿರದಲ್ಲಿ 2000 ರೂಪಾಯಿ ಹಾಗೂ 1500 ರೂಪಾಯಿ ಬೆಲೆಯ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ಇದೇ ರೀತಿ ಬೇರೆ ಬೇರೆ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚಾಗಿದೆ. ಇನ್ನೂ ಮಾಲ್ ನಲ್ಲಿ ಕೂಲಿ ಸಿನಿಮಾದ ಟಿಕೆಟ್ ದರ ಕೇಳೋದೆ ಬೇಡ, ಅಷ್ಟರ ಮಟ್ಟಿಗೆ ದರ ಹೆಚ್ಚಾಗಿದೆ. ಆದರೆ ಅಭಿಮಾನಿಗಳು ಮಾತ್ರ ಟಿಕೇಟ್ ದರ ಎಷ್ಟಾದರು ಸರಿ ಸಿನಿಮಾ ಮಾತ್ರ ನೋಡ್ಲೇ ಬೇಕು ಎಂದು ಡಿಸೈಡ್ ಮಾಡಿ ಬಿಟ್ಟಿದ್ದಾರೆ.