ಬಿಗ್‌ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ಇನ್ನೊಂದು ವಾರ ಮಾತ್ರವೇ ಭಾಕಿ ಇದೆ. ಈ ಮಧ್ಯೆ ಬಿಗ್ ಬಾಸ್ ಸ್ಪರ್ಧಿ ರಜತ್ ಕುಟುಂಬಕ್ಕೆ ದೊಡ್ಡ ಶಾಕ್ ಎದುರಾಗಿದೆ. ರಜತ್ ಮಾಜಿ ಗೆಳತಿ ಜೊತೆಗಿನ ಫೋಟೋವೊಂದನ್ನು ಟ್ರೋಲಿಗರು ಟ್ರೋಲ್ ಪೇಜ್ ನಲ್ಲಿ ವೈರಲ್ ಮಾಡಿದ್ದಾರೆ..
ರಜತ್ ಮಾಜಿ ಗೆಳತಿಯೊಂದಿರುವ ಫೋಟೋ ಅಪ್ ಲೋಡ್ ಮಾಡಿದ ಟ್ರೋಲಿಗರು ಬಳಿಕ ಫೋಟೋ ಡಿಲೀಟ್ ಮಾಡಲು ರಜತ್ ಪತ್ನಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಫಿನಾಲೆ ಹಂತದಲ್ಲಿದ್ದು ಇದರಿಂದ ರಜತ್ ಗೆ ಸಮಸ್ಯೆ ಎದುರಾಗುತ್ತದೆ ಎಂಬ ಕಾರಣಕ್ಕೆ ರಜತ್ ತಾಯಿ ಅಪರಿಚಿತರು ನೀಡಿದ ಯುಪಿಐ ಐಡಿಗೆ 6,500 ರೂ. ಹಣವನ್ನು ಹಾಕಿದ್ದಾರೆ.
ರಜತ್ ತಾಯಿ ಹಣ ಹಾಕುತ್ತಿದ್ದಂತೆ ಬೇರೆ ಟ್ರೋಲ್ ಪೇಜ್‌ಗಳಲ್ಲಿ ಫೋಟೋ ಅಪ್ಲೋಡ್ ಆಗಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಮತ್ತಷ್ಟು ಹಣ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅಸಮಾಧಾನಗೊಂಡ ರಜತ್ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಟ್ರೋಲ್ ಪೇಜ್‌ಗಳ ಹಾವಳಿಗೆ ಬೇಸತ್ತು ರಜತ್ ಪತ್ನಿ ಅಕ್ಷಿತಾ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಟ್ರೋಲ್ ಪೇಜ್‌ಗಳಲ್ಲಿ ಅಪ್ಲೋಡ್ ಆಗಿದ್ದ ಫೋಟೋಗಳು ಡಿಲೀಟ್ ಮಾಡಲಾಗಿದೆ.