ಬೆಂಗಳೂರು:- ಲಿಪ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಯಲ್ಲಿ ಬಿದ್ದು ಬಾಲಕ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದಲ್ಲಿ ಜರುಗಿದೆ.
Advertisement
ಆಟವಾಡುವಾಗ ಮಳೆನೀರು ತುಂಬಿದ್ದ ಗುಂಡಿಯಲ್ಲಿ 5 ವರ್ಷದ ಸುಹಾಸ್ ಗೌಡ ಎಂಬ ಬಾಲಕ ಬಿದ್ದು ಸಾವನ್ನಪ್ಪಿದ್ದಾನೆ. ಇದೇ ತಿಂಗಳ 23 ನೇ ತಾರೀಖು ಬೆಳಗ್ಗೆ 9 ಗಂಟೆ ವೇಳೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕನ್ನಮಂಗಲದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಸಲಾಗ್ತಿತ್ತು. ಕಟ್ಟಡದಲ್ಲಿ ಲಿಪ್ಟ್ ಗಾಗಿ 5 ಅಡಿ ಗುಂಡಿ ತೋಡಲಾಗಿತ್ತು. ಆ ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದು, ಸಿಬ್ಬಂದಿ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ. ಹೀಗಾಗಿ ಮನೆ ಮುಂಭಾಗ ಆಟವಾಡುವ ವೇಳೆ ಆಯತಪ್ಪಿ ಗುಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.
ಘಟನೆ ಹಿನ್ನೆಲೆ, ಮಿಲ್ಕ್ ಡೈರಿ ಅಧ್ಯಕ್ಷನ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.