ಹಾವೇರಿ: ಕಳೆದ ಒಂದು ವಾರದಿಂದ ಸರಿಯುವ ಜಿಲ್ಲೆಯ ಬಹುತೇಕ ಕಡೆ ಮಲೆನಾಡ ವಾತಾವರಣ ನಿರ್ಮಾಣ ವಾಗಿದೆ. ಹಾವೇರಿ ಜಿಲ್ಲೆಯಾದ್ಯಂತ ರಾತ್ರಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ, ಇದರ ಮದ್ಯೆ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಕಾಣದೆ ಬಾಲಕನೋರ್ವ ಚರಂಡಿಗೆ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಹಾವೇರಿ ಎಸ್ಪಿ ಕಚೇರಿ ಮುಂಭಾಗದಲ್ಲಿ ನಡೆದಿದೆ.
ನೀವೆದನ್ ಬಸವರಾಜ್ ಗುಡಗೇರಿ (12) ಮೃತಪಟ್ಟ ಬಾಲಕ. ಮಳೆ ಹೆಚ್ಚಾಗಿರೋ ಹಿನ್ನೆಲೆ ಬಾಲಕ ಬೆಳಗ್ಗೆ ರಸ್ತೆಯಲ್ಲಿ ನೀರನ್ನ ನೋಡುಲು ಹೋಗಿದ್ದ. ಈ ವೇಳೆ ರಸ್ತೆ ಕಾಣದೆ ಚರಂಡಿಗೆ ಬಿದ್ದು ಬಾಲಕ ಕೊಚ್ಚಿ ಹೋಗಿದ್ದಾನೆ. ಸುದ್ದಿ ಕೇಳುತ್ತಿದ್ದಂತೆ ತಾಯಿ ಅಸ್ವಸ್ಥರಾಗಿದ್ದು,
ಅಂಬುಲೆನ್ಸ್ ಮೂಲಕ ಅವರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ನಗರಸಭೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ಬಾಲಕನ ಪತ್ತೆಗಾಗಿ ಸತತ ಒಂದೂವರೆ ಗಂಟೆಯಿಂದ ಪಿ.ಬಿ ರಸ್ತೆ ಬಳಿ ಇರುವ ಚರಂಡಿಯಲ್ಲಿ ಶೋಧ ಕಾರ್ಯ ಮುಂದುವರೆಯುತ್ತಿದೆ.