ಚಿತ್ರದುರ್ಗ:– ಪಾರಿವಾಳದ ಜೀವ ಉಳಿಸಲು ವಿದ್ಯುತ್ ಕಂಬ ಏರಿದ್ದ ಬಾಲಕ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಹನುಮಾಪುರ ಗ್ರಾಮದಲ್ಲಿ ಜರುಗಿದೆ.
Advertisement
12 ವರ್ಷದ ರಾಮಚಂದ್ರ ವಿದ್ಯುತ್ ಕಂಬ ಏರಿ ಜೀವ ಕಳೆದುಕೊಂಡ ಬಾಲಕ ಎನ್ನಲಾಗಿದೆ. ಮೃತ ಬಾಲಕನ ಹನುಮಾಪುರ ಗ್ರಾಮದ ಓಬಳಸ್ವಾಮಿ ಪುತ್ರ ಎಂದು ತಿಳಿದು ಬಂದಿದೆ. ಗ್ರಾಮದ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಬಾಲಕ ಜೀವ ಉಳಿಸಲು ಕಂಬ ಏರಿದ್ದ. ಈ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೇ ಜೀವ ಬಿಟ್ಟಿದ್ದಾನೆ.
ಪಾರಿವಾಳದ ಜೀವ ಉಳಿಸಿ, ಜೀವ ಕಳೆದುಕೊಂಡ ಬಾಲಕನ ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ರಾಂಪುರ ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.