ಗದಗ:- ತಲ್ವಾರ್, ಬಿಯರ್ ಬಾಟಲ್ ಹಾಗೂ ಚಾಕುವಿನಿಂದ ಇರಿದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಗದಗ ನಗರದ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಬಳಿ ಜರುಗಿದೆ.
https://www.facebook.com/share/r/1ZnHdFjF3j/
ಸಿನಿಮೀಯ ರೀತಿಯಲ್ಲಿ ಯುವಕನ ಮೇಲೆ ಮೂವರು ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ಭಯಾನಕ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅರುಣಕುಮಾರ್ ಕೋಟೆಗಲ್ಲ ಗಂಭೀರ ಗಾಯಗೊಂಡ ಯುವಕ.
ಎಸ್, ಅರುಣಕುಮಾರ್ ಕೋಟೆಗಲ್ಲ ಎಂಬ ಯುವಕ ಹೋಟೆಲ್‌ನಲ್ಲಿ ಊಟಕ್ಕೆ ಕುಳಿತಿದ್ದಾಗ, ಮೂವರು ಯುವಕರು ಏಕಾಏಕಿ ಒಳಗೆ ನುಗ್ಗಿ ತಲ್ವಾರ್, ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ನಂತರ ದುರ್ಗಾ ಬಾರ್ ಬಳಿಯೂ ಬಿಯರ್ ಬಾಟಲ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ದೇಹದ ಹಲವು ಭಾಗಗಳಲ್ಲಿ ಚಾಕುವಿನ ಇರಿತವಾಗಿದ್ದು, ಅರುಣಕುಮಾರ್ ರಕ್ತಸಿಕ್ತ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ. ಕೂಡಲೇ ಆತನನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಹಳೇ ದ್ವೇಷದ ಹಿನ್ನೆಲೆ ಮೂವರು ಪುಂಡರಿಂದ ಈ ಕೃತ್ಯ ನಡೆದಿದ್ದು, ಜನನಿಬಿಡ ಪ್ರದೇಶದಲ್ಲಿಯೇ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿದ್ದಾರೆ. ಘಟನೆ ನೋಡಿದ ಗದಗ-ಬೆಟಗೇರಿ ಜನ ಭಯಭೀತರಾಗಿದ್ದರು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಗದಗ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಶಹರ ಠಾಣೆಯ ಇನ್ಸ್‌ಪೆಕ್ಟರ್ ಎಲ್ ಕೆ ಜೂಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ತನಿಖೆ ಚುರುಕುಗೊಳಿಸಿ ಘಟನೆ ಬೆನ್ನಲ್ಲೇ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಶಹರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋ ಡ್ರೈವರ್ ಗಳಾದ ಕಿಲ್ಲಾ ಓಣಿಯ ಮುಸ್ತಾಕ್ ತಂದೆ ಹುಸೇನ್ ಸಾಬ ಮೂಲಿಮನಿ, ಹುಡ್ಕೋ ನಿವಾಸಿ
ಅಭಿಷೇಕ್ ಹರ್ಲಾಪೂರ ಹಾಗೂ ಟೈಲ್ಸ್ ಕೆಲಸ ಮಾಡುವ ದಾಸರ ಓಣಿಯ ಸಾಯಿಲ್ ತಂದೆ ಹುಸೇನ್ ಸಾಬ ಎಂಬುವರೇ ಬಂಧಿತರು.
ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


