ಸರ್ವರಿಗೂ ಸಮಪಾಲಿನ ಬಜೆಟ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶುಕ್ರವಾರ 4 ಲಕ್ಷ ಕೋಟಿ ರೂಗಳ ಬೃಹತ್ ಬಜೆಟ್ ಮಂಡಿಸಿದ್ದಾರೆ. ಇದು ಸರ್ವರಿಗೂ ಸಮಪಾಲಿನ ಅಭಿವೃದ್ಧಿ ಬಜೆಟ್ ಆಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರೈತರ ಪರವಾಗಿ, ಬಡವರ ಪರವಾಗಿ ಉದ್ಯೋಗದಾತರಿಗೆ ಮತ್ತು ಕೈಗಾರಿಕಾಕ್ರಾಂತಿ ತರುವಲ್ಲಿ ಈ ಬಜೆಟ್ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಲ್.ಆರ್. ಕಿತ್ತೂರ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಳ್ಳಿಯಿಂದ ಬೆಂಗಳೂರಿನವರಿಗೆ ಅಭಿವೃದ್ಧಿಪಡಿಸಲು ಎಲ್ಲಾ ತರಹದ ಆರ್ಥಿಕ ಅನುದಾನ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಆರ್ಥಿಕ ನೆರವು ನೀಡಲಾಗಿದೆ. ಒಟ್ಟಾರೆಯಾಗಿ ಇದು ಗ್ಯಾರಂಟಿ ಬಜೆಟ್ ಆಗಿದೆ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here