ಗದುಗಿಗೆ ಸಿಹಿ-ಕಹಿ ಮಿಶ್ರ ಭಾಗ್ಯದ ಬಜೆಟ್

0
state budget
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ೧೫ನೇ ಬಜೆಟ್‌ನಲ್ಲಿ ಗದಗ ಜಿಲ್ಲೆಯ ಪ್ರತ್ಯೇಕ ಭಾಗ್ಯದ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಸೂಪರ್ ಸ್ಪೇಷಾಲಿಟಿ ಕಾರ್ಡಿಯಾಕ್ ಸೆಂಟರ್ ಘೋಷಣೆಯೊಂದನ್ನು ಹೊರತುಪಡಿಸಿ ಗದಗ ಜಿಲ್ಲೆಗೆ ವಿಶೇಷವೆನ್ನಿಸುವಂತಹ ಯಾವುದೇ ಕೊಡುಗೆ ಒದಗಿಬಂದಿಲ್ಲ.

Advertisement

ಜಿಲ್ಲಾ ಆಸ್ಪತ್ರೆಯಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಕ್ಯಾಥ್‌ಲ್ಯಾಬ್ ಜೊತೆಗೆ ಸೂಪರ್ ಸ್ಪೇಷಾಲಿಟಿ ಕಾರ್ಡಿಯಾಕ್ ಸೆಂಟರ್ ಕಾರ್ಯಾರಂಭಕ್ಕೆ ೧೦ ಕೋಟಿ ರೂ. ಘೋಷಣೆಯಾಗಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಗದಗ ಜಿಲ್ಲೆಯ ಆರೋಗ್ಯ ಸೇವೆಗೆ ಹೆಚ್ಚು ಬೆಂಬಲ ಸಿಕ್ಕಿರುವುದು ತುಸು ಸಮಾಧಾನ ತಂದಿದೆ.

c m siddaramayya

c m siddaramayya

 

 

 

 

 

 

ಕೊಪ್ಪಳ, ಚಾಮರಾಜನಗರ ಮತ್ತು ಗದಗ ಜಿಲ್ಲಾ ಆಸ್ಪತ್ರೆಯ ನೂತನ ೪೫೦ ಹಾಸಿಗೆಗಳ ಆಸ್ಪತ್ರೆಯ ಪೀಠೋಪಕರಣ ಖರೀದಿಗೆ ೪೫೦ ಕೋಟಿ ರೂ., ಶಿರಹಟ್ಟಿ ಸಹಿತ ರಾಜ್ಯದ ೭ ತಾಲೂಕುಗಳ ೧೦೦ ಹಾಸಿಗೆ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ೨೮೦ ಕೋಟಿ ರೂ. ಘೋಷಣೆಯಾಗಿದೆ. ಇನ್ನು ಪ್ರಸಕ್ತ ಬಜೆಟ್‌ನಲ್ಲಿ ಮುಂದಿನ ಆರ್ಥಿಕ ವರ್ಷದ ಕುರಿತು ಪ್ರಸ್ತಾಪವಾಗಿದ್ದು, ೨೦೨೫-೨೬ರಲ್ಲಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆಯಾಗಲಿದೆ ಎನ್ನುವ ಭರವಸೆ ಸಿಕ್ಕಿದೆ.

ಇನ್ನು, ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಶೀತಲ ಘಟಕ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದ್ದು, ಗದಗ ಸಹಿತ ೫ ಜಿಲ್ಲೆಗಳಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣದ ಭರವಸೆಗೆ ನೀರೆರೆದಿದೆ. ಕರ್ನಾಟಕ ರೈತ ಸಮೃದ್ಧಿ ಯೋಜನೆ ಮೂಲಕ ರೈತರಿಗೆ ಮಾರ್ಗದರ್ಶನ, ಕೃಷಿ ಭಾಗ್ಯ ಮರುಜಾರಿ, ಬೀಜ ಬ್ಯಾಂಕ್, ಕೈಗೆಟುಕುವ ಬೆಲೆಯಲ್ಲಿ ಸಿರಿಧಾನ್ಯ ದೊರಕಿಸಲು ಕ್ರಮ, ರೈತ ಉತ್ಪಾದಕ ಸಂಸ್ಥೆಗಳಿಗೆ ಉತ್ತೇಜನ ಸಿಕ್ಕಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರಾಗಿದ್ದ ಮುಂಡರಗಿ ತಾಲೂಕಿನ ಜಾಲವಾಡಗಿ ಏತ ನೀರಾವರಿ ಯೋಜನೆ, ರೋಣ ತಾಲೂಕಿನ ಮಲ್ಲಾಪುರ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ದೊರೆತಿದೆ. ರಾಜ್ಯದ ೨೫ ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್ ಘೋಷಣೆಯಾಗಿದ್ದು, ಗದಗ ಜಿಲ್ಲೆಯೂ ಸ್ಥಾನ ಪಡೆದಲ್ಲಿ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ. ಉದ್ಘಾಟನೆಗೊಂಡಿರುವ ಬೆಟಗೇರಿ ತಾರಾಲಯ ವೀಕ್ಷಣೆಗೂ ಬಜೆಟ್ ಅನುಮೋದನೆ ನೀಡಿದೆ.

ಸಿಎಂ ಸಿದ್ದರಾಮಯ್ಯ ನೂತನ ಮರಳು ನೀತಿ ೨೦೨೦ ಅನುಷ್ಠಾನಕ್ಕೆ ಮುಂದಾಗಿರುವುದು ಜಿಲ್ಲೆಯ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳುವ ನಿರೀಕ್ಷೆ ಮೂಡಿಸಿದೆ. ಪ್ರಸಕ್ತ ಬಜೆಟ್‌ನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಕಾರ್ಯಕ್ರಮ ಘೋಷಣೆಯಾಗಿದ್ದರೂ ಸಚಿವ ಎಚ್.ಕೆ. ಪಾಟೀಲ ತಮ್ಮ ತವರು ಜಿಲ್ಲೆಗೆ ವಿಶೇಷ ಅನುದಾನ ತರುವಲ್ಲಿ ಹೆಚ್ಚು ಫಲಕಾರಿಯಾಗಿಲ್ಲ. ಲಕ್ಕುಂಡಿ ಸಹಿತ ೫೪ ಪ್ರವಾಸಿ ತಾಣಗಳ ಅಭಿವೃದ್ಧಿಗೆ ೮೦೪ ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಯಾವುದೇ ಅನುದಾನ ಲಭ್ಯವಾಗಿಲ್ಲ. ಡಂಬಳದಲ್ಲಿ ತೋಟಗಾರಿಕೆ ಕಾಲೇಜ್, ಕಪ್ಪತಗುಡ್ಡದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣಾ ಕೇಂದ್ರ (ಆಯುರ್ವೇದ ಮಹಾವಿದ್ಯಾಲಯ) ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ.

ಬಜೆಟ್‌ನಲ್ಲಿ ಜಿಲ್ಲೆಗೆ ದಕ್ಕಿದ್ದಿಷ್ಟು

* ಗದಗ ಜಿಲ್ಲಾಸ್ಪತ್ರೆಯ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೇಷಾಲಿಟಿ ಕಾರ್ಡಿಯಾಕ್ ಯುನಿಟ್ ಆರಂಭಕ್ಕೆ ೧೦ ಕೋಟಿ ರೂ.

* ಶಿರಹಟ್ಟಿ ಸಹಿತ ರಾಜ್ಯದ ೭ ತಾಲೂಕು ಕೇಂದ್ರಗಳಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಗೆ ೨೮೦ ಕೋಟಿ ರೂ.

* ಗದಗ ಸೇರಿದಂತೆ ಮೂರು ಜಿಲ್ಲಾಸ್ಪತ್ರೆಗಳ ನೂತನ ಕಟ್ಟಡಕ್ಕೆ ಅಗತ್ಯವಿರುವ ವೈದ್ಯಕೀಯ ಪೀಠೋಪಕರಣ ಖರೀದಿಗೆ ೧೫೦ ಕೋಟಿ ರೂ.

* ೨೦೨೫-೨೬ನೇ ಸಾಲಿಗೆ ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (ಐಪಿಎಚ್‌ಎಲ್)

* ಗದಗ ಜಿಲ್ಲೆಯ ರೋಣ ಸಹಿತ ರಾಜ್ಯದ ಮೂರು ಕಡೆ ಜಿಟಿಟಿಸಿ ನಿರ್ಮಾಣಕ್ಕೆ ೧೫೦ ಕೋಟಿ ರೂ.

* ರೋಣ ತಾಲೂಕಿನ ಮಲ್ಲಾಪುರ ಬಳಿ ರೈಲ್ವೆ ಮೇಲ್ಸೇತುವೆ ಸಹಿತ ಒಟ್ಟು ೬ ಮೇಲ್ಸೇತುವೆ ಹಾಗೂ ಕೆಳಸೇತುವೆಗೆ ೩೫೦ ಕೋಟಿ ರೂ.

* ಮುಂಡರಗಿ ತಾಲೂಕಿನ ಜಾಲವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುದಾನ.

* ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ.


Spread the love

LEAVE A REPLY

Please enter your comment!
Please enter your name here