ವಿಜಯಸಾಕ್ಷಿ ಸುದ್ದಿ, ಗದಗ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ ಬಜೆಟ್ ಬೆಲೆ ಏರಿಕೆ ಮುಂಗಡ ಪತ್ರದಂತಿದೆ. ಈ ಬಜೆಟ್‌ನಿಂದಾಗಿಯೇ ಪ್ಲಾಸ್ಟಿಕ್, ವಿದ್ಯುತ್ ಉಪಕರಣಗಳು, ಬಟ್ಟೆ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಆಗಿದೆ. ಇದು ಜನಸಾಮಾನ್ಯರ ಹೊರೆ ಹೆಚ್ಚಿಸುವ ಬಜೆಟ್ ಆಗಿದೆ.
ಇದು ದೇಶದ ಮತ್ತು ರಾಜ್ಯದ ಜನರ ನಿರೀಕ್ಷೆಗಳನ್ನು ಹುಸಿ ಮಾಡಿರುವ ಮುಂಗಡಪತ್ರವಾಗಿದೆ ಎಂದು ಕಾಂಗ್ರೆಸ್ ಯುವನಾಯಕ ಕರೀಮಸಾಬ ಸುಣಗಾರ ಟೀಕಿಸಿದ್ದಾರೆ.



