ಕಠ್ಮಂಡು: 40 ಭಾರತೀಯ ಪ್ರಯಾಣಿಕರ ಬಸ್ ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಇಂದು ಉರುಳಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
Advertisement
ಬಸ್ ನದಿಯ ದಡದಲ್ಲಿ ಬಿದ್ದಿತ್ತು ಎಂದು ತನಾಹುನ್ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ದೀಪ್ಕುಮಾರ್ ರಾಯ ತಿಳಿಸಿದ್ದಾರೆ. ಉತ್ತರಪ್ರದೇಶದ ಎಫ್ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಪಲ್ಟಿಹೊಡೆದಿದೆ.
ಹೌದು 40 ಭಾರತೀಯ ಪ್ರಯಾಣಿಕರಿದ್ದ ಬಸ್ ಪೋಖರಾದಿಂದ ಕಠ್ಮಂಡುವಿನಿಂದ ತೆರಳುತ್ತಿತ್ತು. ಆಗ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಉರುಳಿದೆ. 14 ಜನರು ಸಾವನ್ನಪ್ಪಿದ್ದು ಮತ್ತು 16 ಮಂದಿ ಗಾಯಗೊಂಡಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಅಪಘಾತ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬಸ್ಸು ರಸ್ತೆಯಿಂದ ಸುಮಾರು 300 ಮೀಟರ್ ಉರುಳಿ ನದಿಗೆ ಬಿದ್ದಿದೆ.