ದೊಡ್ಡಬಳ್ಳಾಪುರ: ಮನೆಯ ಮಾಲೀಕನ ಮನೆಯಲ್ಲಿಯೇ ಕಳ್ಳಿಯೊಬ್ಬಳು ಕಳ್ಳತನ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಪಾಲನಜೋಗನಹಳ್ಳಿಯಲ್ಲಿ ನಡೆದಿದೆ. ಮುನಿಸ್ವಾಮಿ (75) ಮನೆ ಮಾಲೀಕನಾಗಿದ್ದು, ಮಮತಾ(25) ಕಳ್ಳತನ ಮಾಡಿರುವ ಆರೋಪಿಯಾಗಿದ್ದಾಳೆ.
Advertisement
ಮನೆಯ ಕೀ ಯನ್ನು ಕಿಟಕಿಯಲ್ಲಿ ಇಟ್ಟು ಹೋಗಿದ್ದನ್ನು ಕಳ್ಳಿ ಗಮನಿಸಿದ್ದಾಳೆ. ವೃದ್ಧ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮನೆ ಒಳಗೆ ಹೋದ ಮಮತಾ, ಬೀರುವಿನಲ್ಲಿದ್ದ 92 ಗ್ರಾಂ ನ ಚಿನ್ನದ ಚೈನ್, ಬ್ರಸ್ ಲೈಟ್, ಓಲೆ, ಬಳೆ ಉಂಗುರ ಕಳ್ಳತನ ಮಾಡಿದ್ದಾಳೆ.
ಅದಲ್ಲದೆ ಕಳ್ಳತನ ಮಾಡಿದ ಒಡವೆಗಳನ್ನು ಖಾಸಗಿ ಬ್ಯಾಂಕ್ ನಲ್ಲಿಟ್ಟಿದ್ದಳು. ಆರೋಪಿಯಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು, ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನವನ್ನು ಮತ್ತೆ ವಾಪಸ್ ಮಾಲೀಕರಿಗೆ ಇನ್ಸ್ಪೆಕ್ಟರ್ ಸಾಧಿಕಗ ಪಾಷಾ ಅವರು ಕೊಟ್ಟಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.