Road Accident: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು!

0
Spread the love

ವಿಜಯಪುರ:- ಬಸವನ ನಗರ ಪ್ರದೇಶದಲ್ಲಿ ದ್ವಿಚಕ್ರ ವಾಹನಕ್ಕೆ ಇನ್ನೋವಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವ ವಕೀಲ ಸಾವಿಗೀಡಾಗಿರುವ ಘಟನೆ ಜರುಗಿದೆ.

Advertisement

ಆ್ಯಕ್ಟಿವಾ ದ್ವಿಚಕ್ರ ವಾಹನಕ್ಕೆ ಇನ್ನೋವಾ ವಾಹನ ಡಿಕ್ಕಿ ಹೊಡೆದಿದೆ. ಆದರೂ ತಕ್ಷಣ ವಾಹನ ನಿಲ್ಲಿಸದ ಕಾರಿನ ಚಾಲಕ, ಸವಾರನನ್ನು ಸುಮಾರು ಎರಡೂವರೆ ಕಿ.ಮೀ. ದೂರಕ್ಕೆ ಎಳೆದೊಯ್ದಿದ್ದಾನೆ.

ಪರಿಣಾಮ ಬೈಕ್ ಸವಾರ ಯುವ ವಕೀಲ 37 ವರ್ಷದ ರವಿ ಮೇಲಿನಮನಿ ಸ್ಥಳದಲ್ಲೇ ಮೃತಟ್ಟಿದ್ದಾನೆ.

ಅಪಘಾತದ ಸಂದರ್ಭದಲ್ಲಿ ವಕೀಲ ರವಿ ಬೈಕ್‍ನ ಅಡಿಯಲ್ಲಿ ಸಿಲುಕಿದ್ದು, ಬಸವನಗರದಿಂದ ಜಿ.ಪಂ. ಪ್ರವೇಶ ದ್ವಾರದ ವರೆಗೂ ಕಾರು ಚಾಲಕ ಎಳೆದೊಯ್ದಿದ್ದಾನೆ.

ಈ ಹಂತದಲ್ಲಿ ದೇಹ ವಾಹನದಿಂದ ಬೇರ್ಪಟ್ಟ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದು, ರವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


Spread the love

LEAVE A REPLY

Please enter your comment!
Please enter your name here