ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ವಿಶ್ವಮಧ್ವ ಮಹಾಪರಿಷತ್ ಗದಗ ಶಾಖೆ ವತಿಯಿಂದ ಫೆ. ೧೦ರಿಂದ ೧೮ರವರೆಗೆ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀ ಮನ್ಮಧ್ವ ನವರಾತ್ರೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
Advertisement
ಫೆ. ೧೮ರಂದು ಬೆಳಿಗ್ಗೆ ೬ ಗಂಟೆಗೆ ಶ್ರೀ ಸುಮಧ್ವವಿಜಯ ಸರ್ವಮೂಲ ಗ್ರಂಥಗಳ ಪಾರಾಯಣ, ವಾಯುಸ್ತುತಿ, ಪುನಶ್ಚರಣ ಸಹಿತಹೋಮ ಜರುಗಿತು. ನಂತರ ಶ್ರೀ ಮಧಾಚಾರ್ಯರ ಪ್ರತಿಮೆ ಹಾಗೂ ಸರ್ವಮೂಲ ಗ್ರಂಥಗಳ ಭವ್ಯ ಮೆರವಣಿಗೆ, ಅಷ್ಟಾವಧಾನ ಸೇವೆಗಳು ಜರುಗಿದವು. ಸಾಯಂಕಾಲ ಕಲಾವಿದ ಅನಂತ ಕುಲಕರ್ಣಿ ಇವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ೬.೩೦ಕ್ಕೆ ಶ್ರೀ ಮಧ್ವಾಚಾರ್ಯರ ಸಂದೇಶ ವಿಷಯ ಕುರಿತು ಪಂ. ವರದರಾಜಾಚಾರ್ಯ ಹುನಗುಂದ ಇವರಿಂದ ವಿಶೇಷ ಉಪನ್ಯಾಸ ಜರುಗಿತು. ಹುಬ್ಬಳ್ಳಿಯ ಪಂ. ಪಾಂಡುರಂಗಾಚಾರ್ಯ ಹುನಗುಂದ ಅಧ್ಯಕ್ಷತೆ ವಹಿಸಿದ್ದರು.