ಸಂಭ್ರಮದ ಎಳ್ಳ ಅಮಾವಾಸ್ಯೆ ಆಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕ ಭಾಗದ, ಅದರಲ್ಲೂ ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ ಎಳ್ಳ ಅಮಾವಾಸ್ಯೆಯ ಹಬ್ಬ ವಿಶೇಷ ಮಹತ್ವ ಪಡೆದಿದೆ. ಈ ದಿನ ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಇಲ್ಲಿಯ ಸಂಪ್ರದಾಯ.

Advertisement

ರೈತರು ತಮ್ಮ ಜಮೀನಿನ ಬೆಳೆಯ ಮಧ್ಯ ಇರುವ ಬನ್ನಿ ಮಹಾಕಾಳಿ ಗಿಡಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅಲ್ಲಿ ಐದು ಕಲ್ಲುಗಳನ್ನು ಇಟ್ಟು, ಪಾಂಡವರು ಹಾಗೂ ಇನ್ನೊಂದು ಕಲ್ಲು ಕಳ್ಳ ಎಂದು ಭಾವಿಸಿ ಪೂಜೆ ಸಲ್ಲಿಸಿ ದೇವರಿಗೆ ಉಡಿ ತುಂಬಿ, ನೈವೇದ್ಯವನ್ನು ಬೆಳೆಯಲ್ಲಿ ಎರಚಿ, ಬಂಧು- ಬಾಂಧವರೆಲ್ಲರೂ ಸಹಭೋಜನ ಸವಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ತಮ್ಮ ಜಮೀನಿನಲ್ಲಿ ಕುಟುಂಬ ಸಮೇತರಾಗಿ ಭೂರಮಗೆ ಬಾಗಿನ ಅರ್ಪಿಸಿ ಬೆಳೆದ ಬೆಳೆ ಹುಲುಸಾಗಿ ಬೆಳೆದು ಉತ್ತಮ ಇಳುವರಿ ಬರಲಿ ಎಂದು ಪ್ರಾರ್ಥಿಸಿದರು.


Spread the love

LEAVE A REPLY

Please enter your comment!
Please enter your name here