ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ, ಶ್ರೇಷ್ಠ ಆರ್ಥಿಕ ತಜ್ಞ ಡಾ.ಮನಮೋಹನ್‌ಸಿಂಗ್ ಅವರ ನಿಧನಕ್ಕೆ ಶುಕ್ರವಾರ ಬೆಳಿಗ್ಗೆ ಶಿಗ್ಲಿ ಗ್ರಾಮದ ಮುಖಂಡರು, ಗುರು ಹಿರಿಯರು ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಸಂತಾಪ ಸೂಚಕ ಸಭೆಯನ್ನು ನೆರವೇರಿಸಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ(ಶಿಗ್ಲಿ), ಮುಖಂಡರಾದ ಸೋಮಣ್ಣ ಡಾನಗಲ್ಲ, ಅಶೋಕ ಶಿರಹಟ್ಟಿ, ಸಿದ್ದು ಪೂಜಾರ, ರಾಜು ಓಲೇಕಾರ, ಮಂಜು ಶಂಭೋಜಿ ಮುಂತಾದವರು ಅಗಲಿದ ಡಾ.ಸಿಂಗ್ ಅವರಿಗೆ ನುಡಿ ನಮನ ಸಲ್ಲಿಸಿದರು.
ಮುಖಂಡ ಯಲ್ಲಪ್ಪ ತಳವಾರ, ರಾಮಣ್ಣ ಕಲಕೋಟಿ, ಸಂತೋಷ ತಾಂದಳೆ, ರಮೇಶ ಬಾರ್ಕಿ, ಕಲ್ಲನಗೌಡ್ರ, ರಾಜು ನದಾಫ್, ಈರಣ್ಣ ಅಕ್ಕೂರ, ದೇವಣ್ಣ ವಾಲಿಕಾರ, ಮಂಜು ಗೊಂದಕರ, ಈಸಣ್ಣ ಹುಲಗೂರ, ಗಂಗಾಧರಯ್ಯ ಘಂಟಾಮಠ, ರಾಮಣ್ಣ ಗೋಣೆಪ್ಪನವರ, ಎಚ್.ಎಫ್. ತಳವಾರ, ಬಾಬಣ್ಣ ಸುಂಕದ, ಬಸಣ್ಣ ಹಂಜಿ ಇತರರು ಹಾಜರಿದ್ದರು.