ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಿರಿಯ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 30 ಸಿವಿಲ್ ಪ್ರಕರಣ, 320 ಕ್ರಿಮಿನಲ್ ಪ್ರಕರಣ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳೆಂದು ಪರಿಗಣಿಸಿದ ಬ್ಯಾಂಕ್‌ನಿಂದ ಸಲ್ಲಿಕೆಯಾದ 50ಕ್ಕೂ ಹೆಚ್ಚಿನ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.
ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಯನ್ನು ನ್ಯಾಯಾಧೀಶರಾದ ಭರತ್ ಯೋಗೀಶ್ ಕರಗುದರಿ, ಸಂಧಾನಕಾರರಾದ ಮಹೇಶ್ ಡಿ.ಆರ್. ಹಾಗೂ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದವರ ಪರ ವಕೀಲರಾಗಿದ್ದ ಬಿ.ಎಸ್. ಪಾಟೀಲ, ಆರ್.ಎಂ. ಕುರಿ ಅವರಿಗೆ ತಿಳಿ ಹೇಳಿ ಅವರ ವಿವಾಹ ಜೀವನವನ್ನು ಸರಿಪಡಿಸಿ ಮತ್ತೆ ಜೀವನ ನಡೆಸುವಂತೆ ಸಲಹೆ ನೀಡಲಾಯಿತು. ಒಂದಾದ ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಪುನಃ ಒಂದಾದರು.
ಸಹಾಯಕ ಅಭಿಯೋಜಕ ಹೀನಾಕೌಸರ ಗಂಜಿಹಾಳ, ಬಿ.ಎಸ್. ಬಾಳೇಶ್ವರಮಠ, ಬಿ.ಎಸ್. ಪಾಟೀಲ, ಎಸ್.ಸಿ. ನರಸಮ್ಮನವರ, ಎನ್.ಐ. ಬೆಲ್ಲದ, ಎ.ಟಿ. ಕಟ್ಟಿಮನಿ, ವಿ.ಕೆ. ನಾಯಕ, ನೀಲಪ್ಪ ಕೋರಣ್ಣವರ, ಮೃತ್ಯುಂಜಯ ಯಲವಗಿ ಇದ್ದರು.