ಧಾರವಾಡ: ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಲೆಂದು ತೆರೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸುವನ್ನು ರಕ್ಷಣೆ ಮಾಡಲಾಗಿದೆ.
Advertisement
ಇದೇ ಗ್ರಾಮದ ರೈತ ಮಹಾದೇವಪ್ಪ ಕಲ್ಲೂರು ಎಂಬುವವರಿಗೆ ಸೇರಿದ ಹಸು, ಮನೆಯ ಹಿತ್ತಲಲ್ಲಿ ಶೌಚಾಲಯ ನಿರ್ಮಾಣಕ್ಕೆಂದು ತೆರೆಯಲಾಗಿದ್ದ ಗುಂಡಿಯಲ್ಲಿ ಬಿದ್ದಿತ್ತು. ನಂತರ ಪ್ರಾಣಿ ಪ್ರಿಯ ಸೋಮಶೇಖರ್ ಚೆನ್ನಶೆಟ್ಟಿ ಮುಂದಾಳತ್ವದಲ್ಲಿ ಜೆಸಿಬಿ ಸಹಾಯದಿಂದ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಲಾಯಿತು.
ಅದೃಷ್ಟವಶಾತ್ ಹಸು ಸೇಫ್ ಆಗಿ ಹೊರ ಬಂದಿದ್ದು, ಮಾಲೀಕ ನಿಟ್ಟುಸಿರು ಬಿಟ್ಟಿದ್ದಾರೆ.