ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಮಾನಸ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ತಿಂಗಳು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಗಣೇಶ್ ಮತ್ತು ಗೀತಾ ದಂಪತಿಗೆ ಸೇರಿದ ಮಗುವಾಗಿದ್ದು, ಪೋಷಕರು ಕಫಾ ಎಂದು ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಿದ್ದರು.
ಭಾನುವಾರ ಆಸ್ಪತ್ರೆಯಲ್ಲಿ ಮಗು ದಾಖಲು ಮಾಡಿದ್ದರು. ಮೂರು ದಿನದಿಂದ ಚಿಕಿತ್ಸೆ ನೀಡಿದ್ದ ವೈದ್ಯರು, ಏಕಾಏಕಿ ಮಗುವಿಗೆ ತುಂಬಾ ಸೀರಿಯಸ್ ಇದೆ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಆದರೆ ಮಗು ಆಸ್ಪತ್ರೆಯಲ್ಲಿಯೇ ಸಾವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಮಗು ಬದುಕಿದ್ದಾಗಲೇ ಹೇಳಿದ್ದರೆ ಮಗು ಉಳಿಸಿಕೊಳ್ಳುತ್ತಿದ್ದೊ ಎಂದು ಪೋಷಕರ ಅಳಲು ತೋಡಿಗೊಂಡಿದ್ದು, ಮಗುವಿನ ಸಾವಿಗೆ ನ್ಯಾಯ ಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



