ಕೋಲಾರ:- ಕೋಲಾರದಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವ ಕೃತ್ಯ ಒಂದು ನಡೆದಿದೆ. 52 ವರ್ಷದ ತಂದೆಯಿಂದಲೇ 20 ವರ್ಷದ ಮಗಳು ಗರ್ಭಿಣಿಯಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಆರಮಾನಹಳ್ಳಿಯಲ್ಲಿ ಜರುಗಿದೆ.
Advertisement
ತಂದೆಯಿಂದಲೇ ಗರ್ಭಿಣಿಯಾದ ಯುವತಿಯನ್ನು 20 ವರ್ಷದ ಆಶಾ ಎಂದು ಗುರುತಿಸಲಾಗಿದೆ. ತಂದೆ 52 ವರ್ಷದ ಅಪ್ಪಯ್ಯಪ್ಪ ಎಂಬಾತನಿಂದಲೇ ಈ ಕೃತ್ಯ ನಡೆದಿದೆ. ಮೂರು ಮಕ್ಕಳ ತಂದೆಯಾಗಿರುವ ಅಪ್ಪಯ್ಯಪ್ಪ, ಗಾರೆ ಕೆಲಸ ಮಾಡಿಕೊಂಡಿದ್ದ. 11 ವರ್ಷದ ಹಿಂದೆಯೇ ಪತ್ನಿಯನ್ನ ಅಪ್ಪಯ್ಯಪ್ಪ ಕಳೆದುಕೊಂಡಿದ್ದು, ಮೂರು ಜನ ಮಕ್ಕಳನ್ನ ತಾನೇ ಪೋಷಣೆ ಮಾಡುತ್ತಿದ್ದ. ಇದೀಗ ತಂದೆಯಿಂದಲೇ ಮಗಳು ಗರ್ಭಿಣಿಯಾಗಿರುವುದು ನಾಚಿಕೆ ಪಡುವಂತಾಗಿದೆ. ಅಪ್ಪಯ್ಯಪ್ಪಗೆ 18 ವರ್ಷದ ಮಗ ಹಾಗೂ 16 ವರ್ಷದ ಮಗಳು ಸಹ ಇದ್ದಾರೆ. ಇದೀಗ ಗರ್ಭಿಣಿ ಮಗಳು ಕೊಟ್ಟ ದೂರಿನ ಆಧಾರದ ಮೇಲೆ ಕಾಮಸಮುದ್ರಂ ಪೊಲೀಸರಿಂದ ಆರೋಪಿ ತಂದೆಯನ್ನು ಬಂಧಿಸಲಾಗಿದೆ.