ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಮದುತ್ತರಾದಿ ಮಠಾಧೀಶರಾದ ಪೂಜ್ಯ ಶ್ರೀಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಡಿ.16ರಿಂದ 18ರವರೆಗೆ ಗದಗ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಡಿ. 16ರ ಬೆಳಿಗ್ಗೆ 7.30ಕ್ಕೆ ಶ್ರೀಗಳ ಪಾದಪೂಜೆ ಹಾಗೂ ತಪ್ತಮುದ್ರಾಧಾರಣ, 12ಕ್ಕೆ ಶ್ರೀ ಮೂಲರಾಮ ದಿಗ್ವೀಜಯರಾಮ ದೇವರ ಪೂಜೆ, ಸಾಯಂಕಾಲ 6ಕ್ಕೆ ವಿದ್ವಾಂಸರಿAದ ಉಪನ್ಯಾಸ, ನಂತರ ಪೂಜ್ಯ ಶ್ರೀಪಾದಂಗಳವರಿAದ ಅಮೃತೋಪದೇಶ ಜರುಗುವುದು.
ಡಿ. 17ರ ಬೆಳಿಗ್ಗೆ 7.30ಕ್ಕೆ ಗದಗ ನಗರದ ಕರಿಯಮ್ಮನಕಲ್ಲು ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪಾದಪೂಜಾ ಹಾಗೂ ತಪ್ತಮುದ್ರಾಧಾರಣ ನೆರವೇರುವುದು. ಸಾಯಂಕಾಲ 6ಕ್ಕೆ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವಿದ್ವಾಂಸರ ಉಪನ್ಯಾಸ ನಂತರ ಪೂಜ್ಯ ಶ್ರೀಪಾದಂಗಳವರಿಗೆ ಗೌರವ ಸಮರ್ಪಣೆ, ಪೂಜ್ಯ ಮಹಾಸ್ವಾಮಿಗಳವರ ಅಮೃತೋಪದೇಶ ಜರುಗುವುದು.
ಕಾರಣ ಈ ಎಲ್ಲ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಸಕ್ರಿಯವಾಗಿ ಪಾಲ್ಗೊಂಡು ಶ್ರೀ ಮೂಲರಾಮ, ದಿಗ್ವಿಜಯರಾಮ ದೇವರ ಹಾಗೂ ಶ್ರೀಪಾದಂಗಳವರ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸ್ವಾಗತ ಸಮಿತಿಯ ಪ್ರಕಟಣೆ ಕೋರಿದೆ.