ಬೆಂಗಳೂರು:- ರಾಜಧಾನಿ ಬೆಂಗಳೂರಿನ ವಿಜಯನಗರದ ಹಂಪಿನಗರದಲ್ಲಿ ಕನ್ನಡ ಬರಲ್ಲ ಎಂದ ಕ್ಯಾಷಿಯರ್ ಮೇಲೆ ಕುಡುಕನೋರ್ವ ಹಲ್ಲೆ ಮಾಡಿದ ಘಟನೆ ಜರುಗಿದೆ.
Advertisement
ಅಂಗಡಿಯಲ್ಲಿ ತನಗೆ ಬೇಕಾಗಿದ್ದನ್ನ ತೆಗೆದು ಕೊಂಡು ಅನಂತರ ಹಣ ಕೊಡಲು ಕ್ಯಾಷಿಯರ್ ಬಳಿ ಹಣ ಪಾವತಿ ಮಾಡುವ ವೇಳೆ ಕ್ಯಾಷಿಯರ್ ಕನ್ನಡದಲ್ಲಿ ಮಾತನಾಡಿಲ್ಲ ಎಂಬ ವಿಷಯಕ್ಕೆ ಕಿರಿಕ್ ತೆಗೆದ ಆಸಾಮಿ ಎನ್ನಲಾಗಿದೆ.
ಕ್ಯಾಷಿಯರ್ಗೆ ಕನ್ನಡ ಬರೊದಿಲ್ಲವ ಎಂದು ಕೇಳಿದ್ದಾನೆ ಅದಕ್ಕೆ ಆತ ಕನ್ನಡ ಬರಲ್ಲ ಎಂದು ಹೇಳಿದ್ದಕ್ಕೆ, ಆತನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ.
ವಿಜಯನಗರದ RPC ಲೇಔಟ್ ನಲ್ಲಿ ಫ್ರೈಸ್ ಕ್ಲಬ್ ನಲ್ಲಿ ನೆನ್ನೆ ಮಧ್ಯಾಹ್ನ ಘಟನೆಯಾಗಿದ್ದು. ಅಂಗಡಿಯ ಮಾಲೀಕನಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.