ವಿಜಯನಗರ:- ಜಿಲ್ಲೆಯ ಹೊಸಪೇಟೆ ನಗರದ ಸಿದ್ದಲಿಂಗಪ್ಪ ಕ್ರಾಸ ಬಳಿ ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ.
25 ವರ್ಷದ ಶಾಂತಕುಮಾರ ಕೊಲೆಯಾದ ಯುವಕ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಶೆಯಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರು ಸ್ನೇಹಿತರು ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ. ಬಳಿಕ ಆರೋಪಿ ಹುಲಿಗೇಶ ಎಂಬಾತ ಕೈಯಿಂದ ತೆಲೆಗೆ ಜೋರಾಗಿ ಹೊಡೆದ ಪರಿಣಾಮ ಶಾಂತಕುಮಾರ ನೆಲಕ್ಕೆ ಬಿದ್ದಿದ್ದಾನೆ.
ಅಷ್ಟೇ, ಆತ ನೆಲಕ್ಕೆ ಬೀಳುತ್ತಿದ್ದಂತೆ ಹುಲಿಗೇಶ ಮನ ಬಂದಂತೆ ಕಾಲಿನಿಂದ ಒದ್ದಿದ್ದಾನೆ. ಇನ್ನು ಪ್ರಜ್ಞೆಯಿಲ್ಲದೆ ನೆಲಕ್ಕೆ ಬಿದ್ದಿದ್ದ ಶಾಂತಕುಮಾರನನ್ನು ಸ್ಥಳೀಯರು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅಲ್ಲಿಂದ ಕೊಪ್ಪಳ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವಕ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಹೊಸಪೇಟೆ ಪಟ್ಟಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.