ಬಳ್ಳಾರಿಯಲ್ಲಿನ ಒಂದು ಕಾಲದ ಚಿತ್ರಮಂದಿರ ಈಗ ಬಾಲಕಿಯರ ಸರ್ಕಾರಿ ವಸತಿ ಶಾಲೆ

0
Spread the love

ಬಳ್ಳಾರಿ:  ಜಿಲ್ಲೆಯ ಚಿತ್ರಮಂದಿರ ಒಂದರಲ್ಲಿ ಬಾಲಕಿಯರ ವಸತಿ ಶಾಲೆ ನಡೆಯುತ್ತಿದೆ. ಸರಕಾರ ಈ ಚಿತ್ರಮಂದಿರ ಮಾಲೀಕರಿಗೆ ವರ್ಷಕ್ಕೆ 1.20 ಲಕ್ಷ ರೂ. ಬಾಡಿಗೆ ನೀಡುತ್ತಿದೆ. ಎರಡ್ಮೂರು ತರಗತಿಗಳು ಏಕಕಾಲಕ್ಕೆ ನಡೆಯುವುದರಿಂದ ವಿದ್ಯಾರ್ಥಿನಿಯರಲ್ಲಿ ಗೊಂದಲ ಉಂಟಾಗುತ್ತಿದೆ. ಆಟದ ಮೈದಾನವಿಲ್ಲದೆ, ವಿದ್ಯಾರ್ಥಿನಿಯರು ಮುಖ್ಯರಸ್ತೆಯ ಬಳಿ ಆಟವಾಡುತ್ತಿದ್ದಾರೆ.

Advertisement

ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿನ ಒಂದು ಕಾಲದಲ್ಲಿ ಚಲನಚಿತ್ರ ಮಂದಿರ ಈಗ ಬಾಲಕಿಯರ ಸರ್ಕಾರಿ ವಸತಿ ಶಾಲೆಯಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೂರು ವರ್ಷಗಳ ಹಿಂದೆ 6 ರಿಂದ 10 ನೇ ತರಗತಿಯ ವಸತಿ ಶಾಲೆಯನ್ನು ಪ್ರಾರಂಭಿಸಿದೆ. ವಸತಿ ಶಾಲೆಯಲ್ಲಿ 226 ಬಾಲಕಿಯರಿದ್ದಾರೆ. ಮೊದಲು ಚಿಕ್ಕ ಕಟ್ಟಡದಿಂದ ಶಾಲೆ ನಡೆಯುತ್ತಿತ್ತು. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾದಾಗ ಶಾಲಾ ಆಡಳಿತ ಸಮಿತಿ ದೊಡ್ಡ ಕಟ್ಟಡಕ್ಕಾಗಿ ಸರ್ಕಾರಕ್ಕೆ ಅರ್ಜಿಸಲ್ಲಿಸಿತು.

ಸಮಿತಿಯು ಶಾಲಾ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಿದ್ದರೂ ಸರಕಾರದಿಂದ ಯಾವುದೇ ನೆರವು ಬಂದಿಲ್ಲ ಎಂದು ಶಾಲೆಯ ಕೆಲ ಶಿಕ್ಷಕರು ಆರೋಪಿಸಿದ್ದಾರೆ.

ಹೀಗಾಗಿ ಸಮಿತಿ ಸದಸ್ಯರು ಕಳೆದ ಐದು ವರ್ಷಗಳಿಂದ ಮುಚ್ಚಿದ್ದ ಚಿತ್ರಮಂದಿರದಲ್ಲೇ ಶಾಲೆ ನಡೆಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಹಳೆ ಚಿತ್ರಮಂದಿರಲ್ಲೇ ವಾಸಿಸುವ ಮತ್ತು ಓದುವ ಅನಿವಾರ್ಯತೆ ಮಕ್ಕಳಿಗಿದೆ.

ಈ ಹಿಂದೆ ಶಾಲೆಯನ್ನು ಚಿಕ್ಕ ಹಳೆಯ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ವಿದ್ಯಾರ್ಥಿನಿಯರ ಪೋಷಕರು ಪ್ರತಿಭಟನೆ ನಡೆಸಿದಾಗ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಹೊಸ ಕಟ್ಟಡವಿಲ್ಲದ ಕಾರಣ ಸಮಿತಿ ಸದಸ್ಯರು ಹಳೆಯ ಚಿತ್ರಮಂದಿರದಲ್ಲೇ ಶಾಲೆ ನಡೆಸುತ್ತಿದ್ದಾರೆ.

ಚಿತ್ರಮಂದಿರದ ಮಾಲೀಕರಿಗೆ ಸರಕಾರ ವರ್ಷಕ್ಕೆ 1.20 ಲಕ್ಷ ರೂ. ಬಾಡಿಗೆ ನೀಡುತ್ತಿದೆ. ಎರಡ್ಮೂರು ತರಗತಿಗಳು ಏಕಕಾಲಕ್ಕೆ ನಡೆಯುವುದರಿಂದ ವಿದ್ಯಾರ್ಥಿನಿಯರಿಗೆ ಗೊಂದಲ ಉಂಟಾಗುತ್ತಿದೆ. ಆಟದ ಮೈದಾನವಿಲ್ಲ, ಮುಖ್ಯರಸ್ತೆಯ ಬಳಿ ವಿದ್ಯಾರ್ಥಿನಿಯರು ಆಟವಾಡುತ್ತಾರೆ ಎಂದರು. ನಾವು ಹಲವು ಬಾರಿ ಜ್ಞಾಪಕ ಪತ್ರ ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯನ್ನು ದೊಡ್ಡ ಕಟ್ಟಡಕ್ಕೆ ಸ್ಥಳಾಂತರಿಸಲು ಇನ್ನೂ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲು ಮಾಡಿದರು ಎಂದು ತಿಳಿಸಿದರು.

ಕುರುಗೋಡು ಪಟ್ಟಣದ ಹೊರವಲಯದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ನಾಲ್ಕು ಎಕರೆ ಜಾಗ ಮಂಜೂರಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಶಾಲೆಯ ಕಟ್ಟಡವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದು ಕರ್ನಾಟಕ ರೆಸಿಡೆನ್ಶಿಯಲ್ ಎಜುಕೇಶನಲ್ ಇನ್‌ಸ್ಟಿಟ್ಯೂಶನಲ್ ಸೊಸೈಟಿಯ (ಕೆಆರ್‌ಇಐಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here