ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.
Advertisement
ಪಟ್ಟಣದ ವಿವಿಧ ಮಸೀದಿಗಳ ಮೌಲ್ವಿಗಳು ಸೇರಿದಂತೆ ಮುಸ್ಲಿಂ ಸಮುದಾಯದ ಸಾವಿರಾರು ಬಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಗದಗ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ್, ಇಮಾಮಸಾಬ ಶೇಖ, ತಾಜುದ್ದಿನ್ ಕಿಂಡ್ರಿ, ಎ.ಡಿ. ಮುಜಾವಾರ, ದಾವೂದ ಜಮಾಲ, ಅಲ್ಲಾಭಕ್ಷಿ ಹೊಂಬಳ, ಮನ್ಸೂರ ಹಣಗಿ, ರಿಯಾಜ ಮುಲ್ಲಾ, ಬಶೀರ ದಲೀಲ ಮುಂತಾದವರಿದ್ದರು.


