ಬೆಂಗಳೂರು: ಕೆಲ ಸಂಘಟನೆಗಳೇ ಕೋಮುಗಲಭೆ ಮಾಡಲು ಹುಟ್ಟಿಕೊಂಡಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ನಾಗಮಂಗಲ ಕೋಮುಗಲಭೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರಕ್ಕೂ ತುಷ್ಟೀಕರಣಕ್ಕೂ ಸಂಬಂಧವೇ ಇಲ್ಲ. ಯಾವ ಕಾಲಕ್ಕೆ ಯಾವ ರೀತಿ ಬಣ್ಣ ಬದಲಾಯಿಸಬೇಕೆಂದು ಗೋಸುಂಬೆ ರೀತಿಯಲ್ಲಿ ಬಣ್ಣ ಬದಲಾಯಿಸಿಕೊಂಡು ಮಾತಾಡುವುದು ಸರಿಯಲ್ಲ.
Advertisement
ಇದು ಸರ್ಕಾರದ ವೈಫಲ್ಯ ಅಲ್ಲ. ಕೆಲ ಸಂಘಟನೆಗಳೇ ಕೋಮುಗಲಭೆ ಮಾಡಲು ಹುಟ್ಟಿಕೊಂಡಿವೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಯಾವುದೇ ಕೋಮುಗಲಭೆಯನ್ನು ಸಣ್ಣದು ಎಂದು ತೆಗೆದು ಕೊಳ್ಳಬಾರದು. ಗಂಭೀರವಾಗಿ ತೆಗೆದುಕೊಂಡು ಕ್ರಮ ಜರುಗಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.