ಕಲಬುರಗಿ:- ಸ್ನೇಹಿತನ ಬರ್ತಡೇ ಪಾರ್ಟಿಯಲ್ಲಿ ಶುರುವಾದ ಜಗಳ ಮತ್ತೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ನೇಕಾರರ ಕಾಲೋನಿಯಲ್ಲಿ ಜರುಗಿದೆ.
Advertisement
20 ವರ್ಷದ ಶಿವಕುಮಾರ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಈತನ ಸ್ನೇಹಿತ ಮಲ್ಲಿಕಾರ್ಜುನ ಎಂಬಾತನೇ ಕೊಲೆ ಮಾಡಿ ಸದ್ಯ ಪೋಲಿಸರ ಅತಿಥಿಯಾಗಿದ್ದಾನೆ.
ಬರ್ತಡೇ ಪಾರ್ಟಿ ಮಾಡುವಾಗ ಕ್ಷುಲ್ಲಕ ವಿಚಾರಕ್ಕೆ ಮಲ್ಲಿಕಾರ್ಜುನ & ಶಿವಕುಮಾರ್ ನಡುವೆ ಗಲಾಟೆ ನಡೆದಿದೆ. ಬಳಿಕ ಮಲ್ಲಿಕಾರ್ಜುನ ಎಂಬಾತ, ಕೋಪದಿಂದ ಶಿವಕುಮಾರ್ ಗೆ ಹೊಡೆದಿದ್ದಾನೆ. ಕೂಡಲೇ ಮಲ್ಲಿಕಾರ್ಜುನ್ ಕೊಟ್ಟ ಮುಷ್ಠಿ ಹೊಡೆತಕ್ಕೆ ಶಿವಕುಮಾರ್ ಮಕಾಡೆ ಮಲಗಿದ್ದಾನೆ. ಬಳಿಕ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ.
ಘಟನೆ ಸಂಬಂಧ ಆಳಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ..