ಶಿವಮೊಗ್ಗ: ಟಿವಿ ರಿಮೋರ್ಟ್ ವಿಷಯಕ್ಕೆ ಅಜ್ಜಿ ಬೈದಿದ್ದರೆಂದು ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಸೂಳೆಬೈಲಿನಲ್ಲಿ ಸಂಭವಿಸಿದೆ. ಸಹನಾ(16) ಮೃತ ದುರ್ಧೈವಿಯಾಗಿದ್ದು, ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಿವಾಸಿಯಾದ ಮೃತ ಬಾಲಕಿ ಸಹನಾ,
ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಟಿವಿ ರಿಮೋರ್ಟ್ʼಗಾಗಿ ಇಬ್ಬರು ಮಕ್ಕಳು ಜಗಳವಾಡಿದ್ದಾರೆ. ಇದರಿಂದ ಅಜ್ಜಿ ಬಂದು ಮೊಮ್ಮಗಳಿಗೆ ಬೈದಿದ್ದಾರೆ. ಇದರಿಂದ ಮನನೊಂದ ಮೊಮ್ಮಗಳು ಸಹನಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಈ ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



