ಹುಬ್ಬಳ್ಳಿ:- ಕ್ಷುಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಯುವಕರಿಬ್ಬರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ಪಕ್ಕದಲ್ಲಿನ ಬಾರ್ ಎದುರು ಜರುಗಿದೆ.
Advertisement
ಭಾನುವಾರ ಸಂಜೆ ಬೆಲ್ಟ್ ನಿಂದ ಕುತ್ತಿಗೆಗೆ ಬಿಗಿದು ಯುವಕರಿಬ್ಬರು ಬಡಿದಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಹೊಡೆದಾಟದಿಂದ ಜನರಲ್ಲಿ ಆತಂಕ ಎದುರಾಗಿತ್ತು. ಯುವಕರ ಬಡಿದಾಟದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಈ ಕುರಿತು ಎಲ್ಲೂ ದೂರ ದಾಖಲಾಗಿಲ್ಲ. ಇವರಿಬ್ಬರೂ ಪರ ಊರಿನವರು ಎಂದು ಹೇಳಲಾಗಿದೆ. ಘಟನೆ ಸಂಬಂಧ ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.