ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಕಂಟಕ: ಜಗಳ ಬಿಡಿಸಲು ಹೋದವನಿಗೆ ಗುಂಡೇಟು!

0
Spread the love

ಆನೇಕಲ್:- ಇಬ್ಬರ ಜಗಳ ಬಿಡಿಸಲು ಹೋದಾಗ ಮೂರನೆ ವ್ಯಕ್ತಿಗೆ ಗುಂಡೇಟು ತಗುಲಿರುವ ಘಟನೆ ಆನೇಕಲ್ ನಲ್ಲಿ ಜರುಗಿದೆ.

Advertisement

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿ ಹೊಸಕೋಟೆ ಗ್ರಾಮದಲ್ಲಿ ಘಟನೆ ಜರುಗಿದೆ. ಗುಂಡೇಟು ತಿಂದ ವ್ಯಕ್ತಿಯನ್ನು ಸಂಪಂಗಿ ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಗನ್ ನಿಂದ ಗುಂಡು ಹಾರಿಸಿರುವ ಆರೋಪಿ.

ಚಂದ್ರಶೇಖರ್ ಹಾಗೂ ಶ್ರೀನಿವಾಸ್ ಸಿಡಿ ಹೊಸಕೋಟೆ ಗ್ರಾಮದ ಮುನಿರಾಜು ವೆಂಬು ಅವರ ಮಗನಾಗಿದ್ದು ತಂದೆ ಮಕ್ಕಳು ಇಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಹಲ್ಲೆ ಮಾಡುತ್ತಿದ್ದಾಗ ಬಿಡಿಸಲು ಮುನಿರಾಜು ಅವರ ಅಣ್ಣನಾದ ಸಂಪಂಗಿ ಹಾಗೂ ಪತ್ನಿ ಬಂದಿದ್ದಾರೆ.

ಬಂದು ಸಮಾಧಾನ ಮಾಡಲು ಬಂದಿದ್ದ ಚಂದ್ರಶೇಖರ್ ಸಂಪಂಗಿಯ ಮೇಲೆ ಫೈರಿಂಗ್ ಮಾಡಿದ್ದಾನೆ. ಸಂಪಂಗಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.


Spread the love

LEAVE A REPLY

Please enter your comment!
Please enter your name here