ಬೆಳಗಾವಿ:- ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಇಫ್ತಿಯಾರ್ ಕೂಟದ ವೇಳೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿ ಶಾಸ್ತ್ರೀಯ ಚೌಕದಲ್ಲಿ ಜರುಗಿದೆ. ರಂಜಾನ್ ಹಿನ್ನೆಲೆ ಉಪವಾಸ ಬಿಡುವಾಗ ಈ ಜಗಳ ನಡೆದಿದೆ.
Advertisement
ಮೊದಲಿಗೆ ಬೈಕ್ ಬಿಡಲಿಲ್ಲ ಅಂತಾ ವಾಗ್ವಾದ ನಡೆದಿದ್ದು, ಬಳಿಕ ಗಲಾಟೆಗೆ ವಿಕೋಪಕ್ಕೆ ತಿರುಗಿ ಕೈಯಲ್ಲಿ ಚೇರ್ ಹಿಡಿದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಮಾಹಿತಿ ಆಧರಿಸಿ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.