ಗದಗ: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ದೊಣ್ಣೆ ಹಿಡಿದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಗದಗಿನ ನಂದೀಶ್ವರ ನಗರದಲ್ಲಿ ನಡೆದಿದೆ.
ಭೀಮಪ್ಪ ಜಗ್ಗಲ್ ಎಂಬ ಕುಟುಂಬದ ಮೇಲೆ ಕುಮಾರ್ ಮಿರ್ಚಿ ಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂಧಿದ್ದು, ದೊಣ್ಣೆ ಹಿಡಿದು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದು, ಘಟನೆಯಲ್ಲಿ ಮಹಿಳೆಯರೂ ಜಡೆ ಹಿಡಿದು ಕಾದಾಡಿಕೊಂಡಿರುವ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.
ಕುಮಾರ್ ಮಿರ್ಚಿಗೆ ಸೇರಿದ್ದ ಸುಮಾರು 15 ಜನರ ಗುಂಪು ದಾಳಿ ನಡೆಸಿದರೆಂದು ದೂರಲಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಘಟನೆ ಗದಗ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.



