ಬೆಳಗಾವಿ:- ಇನ್ನೂ ಮೂರು ದಿನದಲ್ಲಿ ಮದುವೆ ಆಗಬೇಕಾಗಿದ್ದ ಮಗನನ್ನು ಕಲ್ಲಿನಿಂದ ಹೊಡೆದು ಆತನ ಸಹೋದರ ಹಾಗೂ ತಂದೆ ಸೇರಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದಲ್ಲಿ ಜರುಗಿದೆ.
Advertisement
25 ವರ್ಷದ ಮಂಜುನಾಥ್ ಉಳ್ಳಾಗಡ್ಡಿ ಮೃತ ಯುವಕ. ನಾಗಪ್ಪ ಹಾಗೂ ಗುರುಬಸಪ್ಪ ಕೊಲೆಗೈದ ಆರೋಪಿಗಳು. ನಿನ್ನೆ ರಾತ್ರಿ ಮಂಜುನಾಥ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಂದೆ ಹಾಗೂ ಸಹೋದರ ಆತನನ್ನು ಕಲ್ಲು, ಇಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದಾರೆ.
ಮಾ.12ರಂದು ಮಂಜುನಾಥ್ ಮದುವೆ ನಿಗದಿಯಾಗಿತ್ತು. ಆತನ ಮದುವೆಗಾಗಿ ಸೇನೆಯಲ್ಲಿದ್ದ ಗುರುಬಸಪ್ಪ ರಜೆಯ ಮೇಲೆ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.