ಬೆಂಗಳೂರು:- ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ರಿಪೀಸ್ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಶಂಕರ್ ಮತ್ತು ಅರವಿಂದ್ ಬಂಧಿತರು. ಸಿಗರೇಟ್ ಖರೀದಿಸುವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡು ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಆರ್‌ಟಿ ನಗರದ ಬಾರ್ ಬಳಿಯಿರುವ ಪಾನ್‌ಶಾಪ್‌ವೊಂದಕ್ಕೆ ಇಬ್ಬರು ತೆರಳಿದ್ದರು. ಈ ವೇಳೆ ಅಂಗಡಿಯವನಿಗೆ ಇಬ್ಬರು ಒಟ್ಟಿಗೆ ಸಿಗರೇಟ್ ಕೊಡುವಂತೆ ಕೇಳಿದ್ದರು. ಅಂಗಡಿಯವ ಇಬ್ಬರ ಪೈಕಿ ಒಬ್ಬನಿಗೆ ಸಿಗರೇಟ್ ನೀಡಿದ್ದ. ಆಗ ಇನ್ನೋರ್ವ ನಾನು ಮೊದಲು ಸಿಗರೇಟ್ ಕೇಳಿದ್ದು, ಹೀಗಾಗಿ ನಾನೇ ಮೊದಲು ಸಿಗರೇಟ್ ತೆಗೆದುಕೊಳ್ಳಬೇಕು ಎಂದು ಕಿರಿಕ್ ಮಾಡಿದ. ಅಲ್ಲಿಂದ ಇಬ್ಬರ ನಡುವೆ ಜಗಳ ಶುರುವಾಯಿತು.
ಆರ್‌ಟಿ ನಗರದಿಂದ ಇಬ್ಬರು ಆರೋಪಿಗಳು ಸದಾಶಿವ ನಗರದ ಕಡೆಗೆ ಬಂದಿದ್ದಾರೆ. ಈ ವೇಳೆ ಓರ್ವ ರಿಪೀಸ್ ಪಟ್ಟಿಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ. ಘಟನೆ ಬಳಿಕ ಸದಾಶಿವ ನಗರ ಪೊಲೀಸರು ಕೊಲೆಯತ್ನ ಕೇಸ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.