ರಾಮನಗರ:- ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲಿನ ಮಡಗು ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಕೋಮಾಗೆ ಜಾರಿರುವ ಘಟನೆ ಜರುಗಿದೆ.
45 ವರ್ಷದ ಭೀಮಪ್ಪ ಸಾವನ್ನಪ್ಪಿದ ವ್ಯಕ್ತಿ. ಗಾಯಗೊಂಡವರನ್ನು ರಮೇಶ್ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ರಸ್ತೆ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ. ಮಲ್ಲಿನ ಮಡಗು ಗ್ರಾಮದಲ್ಲಿ ರಸ್ತೆ ರಿಪೇರಿ ಕಾಮಗಾರಿ ಮಾಡಿಸುತ್ತಿದ್ದ ಯಂಕೋಬನಿಗೆ ಗ್ರಾಮದ ವಿರೇಶ್ ಕಿರಿಕಿರಿ ಮಾಡುತ್ತಿದ್ದ. ಇದರಿಂದ ಬೇಸತ್ತ ಯಂಕೋಬ ಹಾಗೂ ಭೀಮಪ್ಪ ವಿರೇಶ್‌ನಿಗೆ ವಾರ್ನಿಂಗ್ ಕೊಟ್ಟಿದ್ದರು. ಆದರೆ ಅದೇ ದಿನ ರಾತ್ರಿ ವಿರೇಶ್ ಗುಂಪುಕಟ್ಟಿಕೊಂಡು ಬಂದು ಯಂಕೋಬ ಹಾಗೂ ಭೀಮಪ್ಪನ ಮೇಲೆ ಹಲ್ಲೆಗೆ ಮುಂದಾಗಿದ್ದ. ಗಲಾಟೆಯಲ್ಲಿ ಯಂಕೋಬನಿಗೆ ಗಂಭೀರ ಗಾಯವಾಗಿತ್ತು.
ಈ ವೇಳೆ ಎರಡು ಕಡೆಯವರಿಂದಲೂ ಜನ ಸೇರಿದ್ದು, ಗುಂಪು ಘರ್ಷಣೆಯಾಗಿದೆ. ಗಲಾಟೆಯಲ್ಲಿ ಗಂಭೀರ ಗಾಯಗೊಂಡ ಭೀಮಣ್ಣ ಮಾನ್ವಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಯಂಕೋಬ, ರಮೇಶ್ ಸೇರಿ 9 ಜನರು ಗಾಯಗೊಂಡಿದ್ದು, 22 ಜನರ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.