ಗದಗ:- ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದು ದೊಣ್ಣೆಗಳಿಂದ ಬಡಿದಾಡಿಕೊಂಡಿರುವ ಘಟನೆ ಗದಗನ ಎಸ್.ಎಮ್ ಕೃಷ್ಣ ಕಾಲೋನಿಯಲ್ಲಿ ಜರುಗಿದೆ.
ಎಸ್ ಎಮ್ ಕೃಷ್ಣ ಕಾಲೋನಿಯ ಕೆಳಗಿನ ಓಣಿಯ ಯುವಕರ ಮೇಲೆ ಮ್ಯಾಲಿನ ಓಣಿಯ ಯುವಕರಿಂದ ಈ ಅಟ್ಯಾಕ್ ನಡೆದಿದೆ. ಹಲ್ಲೆಯಿಂದ ಹಲವು ಯುವಕರಿಗೆ ತಲೆ, ಕೈ, ಕಾಲು ಸೇರಿ ದೇಹದ ಹಲವು ಭಾಗಗಳಿಗೆ ಗಂಭೀರಗಾಯವಾಗಿದೆ. ಇನ್ನೂ ಹಲ್ಲೆಗೊಳಗಾದ ಓರ್ವ ಯುವಕನ ತಲೆ ರಕ್ತಸಿಕ್ತವಾಗಿದೆ. ಚಿಕಿತ್ಸೆಗಾಗಿ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯುವಕರ ಗಲಾಟೆಗೆ ಓಣಿಯ ಮಹಿಳೆಯರು, ಪೋಷಕರು ಚೀರಾಟ ಕೂಗಾಟ ನಡೆಸಿದ್ದಾರೆ. ಗಲಾಟೆ ನೋಡಿ ಸ್ಥಳೀಯರು ಭಯಭೀತರಾದರು. ಗಾಂಜಾ ಸೇವನೆ ಮಾಡಿ ರೌಡಿಸಂ ಮಾಡ್ತಿರೋ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



