ಕಲಬುರಗಿ: ಕೂಲಿ ಕೆಲಸದ ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಾಲೆಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ರವಿ ಬೋವಿ (26) ಕೊಲೆಯಾದ ಯುವಕನಾಗಿದ್ದು,
Advertisement
ಲಾರಿಯಿಂದ ಕಲ್ಲಿನ ಪರ್ಸಿ ಕೆಳಗಿಳಿಸುವ ವಿಚಾರದಲ್ಲಿ ಗಲಾಟೆ ಶುರುವಾಗಿದ್ದು, ಸಾಲೆಬೀರನಹಳ್ಳಿ ಗ್ರಾಮದ ಮಧುಸೂದನ್ ರೆಡ್ಡಿ ಎಂಬುವನಿಂದ ರವಿ ಎದೆಗೆ ಒದ್ದು ಹಲ್ಲೆ ಮಾಡಲಾಗಿದೆ. ಈ ವೇಳೆ ರವಿ ಎದೆಗೆ ಒದ್ದ ಹಿನ್ನಲೆ ಸ್ಥಳದಲ್ಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಬೆಳಗ್ಗೆಯವರೆಗೆ ಮನೆಯಲ್ಲಿ ವಾಂತಿ ಬೇಧಿಯಿಂದ ಬಳಲುತ್ತಿದ್ದ ರವಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮೃತಪಟ್ಟಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.