ರಾಮನಗರ: ಅಡುಗೆ ಮಾಡುವ ವಿಚಾರಕ್ಕೆ ಪತಿ- ಪತ್ನಿಯ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮನಗರದ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ. ತಿಮ್ಮಮ್ಮ (65) ಮೃತ ಮಹಿಳೆಯಾಗಿದ್ದು, ಪತಿ ರಂಗಯ್ಯ (75) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
Advertisement
ಕಾಯಿ ತುರಿಯುವ ಮಣೆಯಿಂದ ಹೊಡೆದು ರಂಗಯ್ಯ ಪತ್ನಿ ತಿಮ್ಮಮ್ಮಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಪತ್ನಿ ಹತ್ಯೆ ಮಾಡಿದ ನಂತರ ತಿರುಪತಿಗೆ ಎಸ್ಕೇಪ್ ಆಗಲು ರಂಗಯ್ಯ ಮುಂದಾಗಿದ್ದ ಎನ್ನಲಾಗಿದೆ.
ತಕ್ಷಣವೇ ಮಾಹಿತಿ ಪಡೆದ ಪೊಲೀಸರು ರಾಮನಗರದಲ್ಲಿ ರಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.