ದೇವನಹಳ್ಳಿ;- ಸಿಲಿಕಾನ್ ಸಿಟಿ ಬೆಂಗಳೂರಿನ ಥಣಿಸಂದ್ರದಲ್ಲಿರುವ ಹಜ್ ಭವನಕ್ಕೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಘಟನೆ ಜರುಗಿದೆ. ನಿನ್ನೆ ಸಂಜೆ 5ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿ ಹಿನ್ನಲೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹಜ್ ಭವನದಲ್ಲಿ ಪೀಠೋಪಕರಣ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಬೆಂಕಿ ಬಿದ್ದ ಹಿನ್ನಲೆ ಹತ್ತಾರು ದಾಖಲೆ ಸುಟ್ಟಿರುವ ಸಾಧ್ಯತೆ..!? ಇದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿದೆ ಎಂದು ಹೇಳಲಾಗ್ತಿದೆ.
ಆದರೆ ಯಾವ ಕಾರಣದಿಂದ ಬಿಂಕಿಕಾಣಿಸಿಕೊಂಡಿದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಹೆಗಡೇನಗರದಲ್ಲಿನ ಹಜ್ ಭವನಕ್ಕೆ ಬೆಂಕಿಬಿದ್ದ ಹಿನ್ನಲೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನದ ಬೆಂಕಿ ಬಿದ್ದಿದೆಯಾ..!? ಯಾರಾದರೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರಾ..! ?ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿದೆಯಾ ಎನ್ನುವ ಬಗ್ಗೆ ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕಿದೆ
ಸ್ಥಳಕ್ಕೆ 8ಅಗ್ನಿಶಾಮಕ ವಾಹನ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಯತ್ನ ನಡೆದಿದೆ. ಸತತ ಎರಡೂವರೆ ಗಂಟೆಯಿಂದ ಸಿಬ್ಬಂದಿ ಬೆಂಕಿ ನಂದಿಸುತ್ತಿದೆ. ಇನ್ನು ನಿಯಂತ್ರಣಕ್ಕೆ ಬೆಂಕಿ ಬಂದಿಲ್ಲ.
ಹೆಚ್ಚಾಗಿ ಪೀಠೋಪಕರಣ ಇದ್ದ ಕಾರಣ ನಿಯಂತ್ರಣಕ್ಕೆ ಬೆಂಕಿ ಬಂದಿಲ್ಲ. ಸದ್ಯ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್, ಎಸಿಪಿ, ಸಂಪಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.