ರಾಮನಗರ:- ಇಲ್ಲಿನ ಚಿಕ್ಕ ವಿಠಲೇನ ಹಳ್ಳಿ ಗ್ರಾಮದಲ್ಲಿ ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಇದೇ ಗ್ರಾಮದ ಶಿವಕುಮಾರ್ ಎಂಬುವರ ಜಮೀನಿನಲ್ಲಿ ಆಹಾರ ತಿನ್ನಲು ಹೋದ ಅನೆಗೆ ತೆಂಗಿನ ಸುಳಿಯನ್ನು ಮುರಿಯುವ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ. ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕಾಡಾನೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ಯಾ? ಅಥವಾ ಜಮೀನಿಗೆ ಕೊಟ್ಟಿದ್ದ ಕರೆಂಟ್ ನಿಂದ ಸಾವನ್ನಪ್ಪಿದ್ಯಾ ಎಂದು ಪರಿಶೀಲನೆ ಮಾಡಲಾಗುತ್ತಿದೆ.



