ವಿಜಯನಗರ:- ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದೆ. ಈ ಬಾರಿ “ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಗೊರವಪ್ಪ ನುಡಿದಿದ್ದು, ಶುಭ ಸೂಚಕ ಎನ್ನಲಾಗಿದೆ.
ಎಲ್ಲ ಜಾತ್ರೆಗಳಲ್ಲಿ ರಥೋತ್ಸವ ನಡೆದರೆ ಇಲ್ಲಿ ರಥೋತ್ಸವ ನಡೆಯುವದಿಲ್ಲ. ಬದಲಿಗೆ 11 ದಿನ ಉಪವಾಸ ಇರುವ ಗೊರವಯ್ಯ 18 ಅಡಿ ಬಿಲ್ಲೇನೇರಿ ಕಾರ್ಣಿಕ ನುಡಿಯುತ್ತಾರೆ. ಇದನ್ನ ವರ್ಷದ ಭವಿಷ್ಯವಾಣಿ ಎಂದೇ ಪರಿಣಿಸಲಾಗುತ್ತೆ.
ಇಂದು ಸಂಜೆ 5.30 ನಿಮಿಷಕ್ಕೆ 18 ಅಡಿ ಬಿಲ್ಲೇನೇರಿದ ಗೊರವಯ್ಯ ರಾಮಪ್ಪಜ್ಜ ಬಿಲ್ಲೇರಿ ಸದ್ದಲೇ ಎನ್ಬುತ್ತಿದ್ದಂತೆ ಲಕ್ಷಾಂತರ ಸಂಖ್ಯೆಯಲ್ಲಿದ್ದ ಜನಸ್ತೋಮ ಸ್ಥಬ್ಧವಾಯಿತು. “ತುಂಬಿದ ಕೊಡ ತುಳುಕೀತಲೇ ಪರಾಕ್” ಎಂದು ನುಡಿದು ಕೆಳಗೆ ಧುಮುಕಿದರು.
ಗೊರವಪ್ಪಜ್ಜ ಕಾರ್ಣಿಕ ನುಡಿಯುತ್ತಿದ್ದಂತೆ ಭಕ್ತರು ಕಾರ್ಣಿಕ ವಿಶ್ಲೇಷಣೆ ಮಾಡಲಾರಂಭಿಸಿದ್ದಾರೆ. ಶ್ರೀಮೈಲಾರಲಿಂಗೇಶ್ವರ ದೇಗುಲದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಈ ವರ್ಷದ ಕಾರ್ಣಿಕವನ್ನು ಶುಭ ಸೂಚಕವಾಗಿದೆ ಎಂದು ತಿಳಿಸಿದ್ದಾರೆ. ಎಲ್ಲವೂ ಸೂಸೂತ್ರವಾಗಿರಲಿದೆ. ಮಳೆ, ಬೆಳೆ, ಎಲ್ಲವೂ ಕೂಡ ಸಂಪನ್ನವಾಗಲಿದೆ. ರೈತರಿಗೆ ಶುಭವಾಗಲಿದೆ. ಕಳೆದ ಬಾರಿಯೂ ಉತ್ತಮ ಮಳೆ, ಬೆಳೆ ಎಲ್ಲವೂ ಉತ್ತಮವಾಗಿದ್ದವು ಎಂದು ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ ಮಾಡಿದ್ದಾರೆ.
ಕಾರ್ಣಿಕೋತ್ಸವದಲ್ಲಿ ಕಾಗಿನೆಲೆಶ್ರೀಗಳು ಸೇರಿ ಬಳ್ಳಾರಿ ಸಂಸದ ಈ. ತುಕಾರಾಂ, ಹೂವಿನ ಹಡಗಲಿ ಶಾಸಕ ಕೃಷ್ಣನಾಯ್ಕ್, ಡಿಸಿ ದಿವಾಕರ್, ಎಸ್ಪಿ ಡಾ. ಶ್ರೀಹರಿಬಾಬು ಬಿಎಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.