ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಉಡುಗೊರೆ: ವೇತನ ಸಹಿತ ಮುಟ್ಟಿನ ರಜೆಗೆ ಅಸ್ತು

0
Spread the love

ಬೆಂಗಳೂರು: ರಾಜ್ಯದ ಉದ್ಯೋಗದಲ್ಲಿರುವ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಮತ್ತೊಂದು ಮಹತ್ವದ ಉಡುಗೊರೆ ದೊರಕಿದೆ. ಪ್ರತಿ ತಿಂಗಳು ಸಂಬಳ ಸಹಿತ ಋತುಚಕ್ರ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ (Karnataka Cabinet) ಸಭೆ ಗುರುವಾರ ಅನುಮೋದನೆ ನೀಡಿದೆ.

Advertisement

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್‌.ಕೆ. ಪಾಟೀಲ್ ಅವರು, ಸರ್ಕಾರ ಮಹಿಳೆಯರ ಆರೋಗ್ಯ ಹಾಗೂ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ. ಈ ನೀತಿಯ ಮೂಲಕ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಮಹಿಳೆಯರು ತಿಂಗಳಿಗೆ ಒಂದು ದಿನ ಸಂಬಳ ಸಹಿತ ರಜೆ ಪಡೆಯುವ ಅವಕಾಶ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್​, ಬಹುರಾಷ್ಟ್ರೀಯ ಕಂಪನಿಗಳು (MNC), ಐಟಿ, ಖಾಸಗಿ ಕೈಗಾರಿಕಾ ವಲಯಗಳಲ್ಲಿ ಮುಟ್ಟಿನ ರಜೆ ಅನ್ವಯವಾಗಲಿದೆ ಎಂದು ಪಾಟೀಲ್ ತಿಳಿಸಿದರು. ಮುಟ್ಟಿನ ರಜೆ ಕೊಡುವ ನಿಯಮ ಜಾರಿಗೆ ತರಲು ಕಳೆದ ಒಂದು ವರ್ಷದದಿಂದ ಪ್ರಯತ್ನ ಮಾಡಿದ್ದೆವು. ಮಹಿಳೆಯರು ಹಲವು ಕೆಲಸಗಳನ್ನು ಮಾಡುತ್ತಾರೆ. ಮನೆ ಕೆಲಸದ ಜೊತೆ ಮಕ್ಕಳನ್ನು ನೋಡಿಕೊಳ್ಳಬೇಕು. ಮುಟ್ಟಿನ ಸಂದರ್ಭದಲ್ಲಿ ಮಾನಸಿಕವಾಗಿಯೂ ಒತ್ತಡ ಅನುಭವಿಸುತ್ತಾರೆ.

ಹೀಗಾಗಿ ಮುಟ್ಟಿನ ರಜೆ ನೀಡುವ ಬಗ್ಗೆ ಪರಾಮರ್ಶೆ ನಡೆಸಲು ಸಮಿತಿ ರಚನೆ ಮಾಡಿದ್ದೆವು. ಸಮಿತಿ 6 ದಿನಗಳ ಕಾಲ ರಜೆ ಕೊಡಬೇಕು ಎಂದು ಅಲಹೆ ನೀಡಿತ್ತು. ಸರಕಾರ ವಾರ್ಷಿಕ 12 ದಿನ ರಜೆ ಕೊಡುವ ನಿರ್ಧಾರವನ್ನು ಮಾಡಿದೆ. ಬೇರೆ ರಾಜ್ಯಗಳಲ್ಲಿ ಹೇಗೆ ಅನುಷ್ಠಾನವಾಗಿದೆ ಗೊತ್ತಿಲ್ಲ. ಕರ್ನಾಟಕಲ್ಲಿ ನಾವು ಅನುಷ್ಠಾನ ಮಾಡುತ್ತೇವೆ. ಎಲ್ಲ ವಲಯದಲ್ಲೂ ಅನ್ವಯವಾಗುತ್ತೆ. ಸರಕಾರಿ, ಖಾಸಗಿ ವಲಯದಲ್ಲೂ ಅನ್ವಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.


Spread the love

LEAVE A REPLY

Please enter your comment!
Please enter your name here