HomeGadag Newsಚಳ್ಳಮರದ ಉತ್ತಮ ಸಂಘಟನಕಾರ

ಚಳ್ಳಮರದ ಉತ್ತಮ ಸಂಘಟನಕಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜೈ ಭೀಮ ಸಂಘಟನೆಯ ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಮೈಲಾರಪ್ಪ ಚಳ್ಳಮರದ ಓರ್ವ ಉತ್ತಮ ಸಂಘಟಕರಾಗಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವದರಲ್ಲಿ ಎಂದಿಗೂ ಮೊದಲಿಗರಾಗಿರುವ ಚಳ್ಳಮರದವರಿಗೆ ಮುಂದೆ ಉತ್ತಮ ಭವಿಷ್ಯವಿದೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ಪಟ್ಟಣದ ಕಿವುಡ-ಮೂಗ ಮಕ್ಕಳ ಶಾಲೆಯಲ್ಲಿ ಆಚರಿಸಲಾದ ಚಳ್ಳಮರದ ಅವರ 40ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಯುವ ಕಾಂಗ್ರೆಸ್‌ನ ಯಾವುದೇ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದರೂ ಅದಕ್ಕೆ ನಮಗೆ ಮೊದಲು ನೆನಪಾಗುವ ಹೆಸರು ಮೈಲಾರಪ್ಪ ಅವರದು. ಹಗಲಿರುಳೆನ್ನದೆ ಪಕ್ಷದ ಸಂಘಟನೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಅವರ ಗುಣ ಮೆಚ್ಚುಗೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಿಥುನ ಪಾಟೀಲ ಮಾತನಾಡಿ, ಯುವಕರು ಸಂಘಟನೆಯಲ್ಲಿ ತಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಚಳ್ಳಮರದ ಮಾದರಿಯಾಗಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಈ ಪುಟ್ಟ ಮಕ್ಕಳ ಸಮ್ಮುಖದಲ್ಲಿ ಆಚರಿಸಿಕೊಳ್ಳುವ ಮೂಲಕ ಇತರರಿಗೆ ಅವರು ಮಾದರಿಯಾಗಿದ್ದಾರೆ,. ಮುಂದೆ ಅವರಿಗೆ ಉತ್ತಮ ಸ್ಥಾನಮಾನಗಳು ದೊರಕಲಿ ಎಂದರು.

ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಪ್ರಾಚಾರ್ಯ ವೈ.ಸಿ. ಪಾಟೀಲ, ಅಲ್ಲಾಭಕ್ಷಿ ನದಾಫ್, ಅಶೋಕ ಮಂದಾಲಿ, ಬಸವರಾಜ ಕಡೆಮನಿ, ಶರಣಪ್ಪ ಬೆಟಗೇರಿ, ಅಂದಪ್ಪ ಬಿಚ್ಚೂರ, ಎ.ಸಿ. ಪಾಟೀಲ, ಹನುಮಂತಪ್ಪ ದ್ವಾಸಲ, ರಾಜು ಮುಗಳಿ, ಮುತ್ತು ಮೇಟಿ, ಸುರೇಶ ಶಿರೋಳ, ಈರಪ್ಪ ಜೋಗಿ, ಯಲ್ಲಪ್ಪ ಕಿರೇಸೂರ, ಮಹೇಶ ಕಳಸಣ್ಣವರ, ಹುಲಗಪ್ಪ ಚಳ್ಳಮರದ, ಮಾಂತೇಶ ಬೆಳಧಡಿ, ಶಾಲೆಯ ಸಿಬ್ಬಂದಿಯವರಿದ್ದರು. ಎಂ.ಎಸ್. ದಢೇಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ಚಳ್ಳಮರದವರು ಶಾಸಕ ಜಿ.ಎಸ್. ಪಾಟೀಲರ ಸಂಪರ್ಕಕ್ಕೆ ಬಂದ ಮೇಲೆ ಬಹಳಷ್ಟು ಪ್ರವರ್ಧಮಾನಕ್ಕೆ ಬಂದಿದ್ದಾರೆ. ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮನಸ್ಸನ್ನು ಗೆಲ್ಲುವ ಗುಣ ಅವರಲ್ಲಿದೆ. ಭವಿಷ್ಯದಲ್ಲಿ ಅವರು ಉತ್ತಮ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬ ವಿಶ್ವಾಸವಿದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!