ಹುಬ್ಬಳ್ಳಿ:- ನೌಕರಿ ಆಮಿಷ ತೋರಿಸಿ ಮಂಚಕ್ಕೆ ಕರೆದ ಆರೋಪ ಹುಬ್ಬಳ್ಳಿಯ ರೈಲ್ವೆ ಇಲಾಖೆ ಕ್ಲರ್ಕ್ ವಿರುದ್ಧ ಕೇಳಿ ಬಂದಿದೆ.
Advertisement
ಕ್ಲರ್ಕ್ ನದೀಂ ಎಂಬಾತ ವಿರುದ್ಧ ಕೇಶ್ವಾಪುರದ ಮಹಿಳೆ ದೂರು ನೀಡಿದ್ದಾರೆ. ರೈಲ್ವೆ ಇಲಾಖೆ ನೌಕರಿ ಬೇಕು ಅಂದರೆ ಮಂಚ ಏರಬೇಕೆಂದು ಕಿರುಕುಳ ನೀಡಿದ್ದಾನೆ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಗೆಸ್ಟ್ ಹೌಸ್‌ಗೆ ಈ ನದೀಂ ಕರೆದಿದ್ದನಂತೆ.
ಸದ್ಯ ನದೀಂ ವಿರುದ್ಧ ಕೇಶ್ವಾಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಗೆಸ್ಟ್ ಹೌಸ್‌ನಲ್ಲಿದ್ದ ನದೀಂನನ್ನು ಸ್ಥಳೀಯರು ಕೂಡಿಹಾಕಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಕೇಶ್ವಾಪುರ ಠಾಣೆ ಪೊಲೀಸರು ನದೀಂನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.