ತನ್ನದೇ ಭೂಮಿಯಲ್ಲಿ ಕಷ್ಟಪಟ್ಟು ಕೃಷಿ ಮಾಡಿ ಯಶಸ್ಸು ಸಾಧಿಸಿದ ಪದವೀಧರ

0
Spread the love

ಗದಗ: ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಎಲ್ಲರೂ ಹುಬ್ಬೇರುವಂತೆ ಈ ಯುವಕ ಸಾಧನೆ ಮಾಡಿದ್ದಾನೆ. ಹೌದು ಕೆಲಸ ಅರಸಿ ಬೇರೆ ಊರಿಗೆ ಹೋಗದೇ, ಬೇರೊಬ್ಬರ ಕೈ ಕೆಳಗೆ ಕೆಲಸ ಮಾಡದೇ ಪದವೀಧರ ಯುವಕನೋರ್ವ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ತನ್ನದೇ ಭೂಮಿಯಲ್ಲಿ ಕಷ್ಟಪಟ್ಟು ಕೃಷಿ ಮಾಡಿ ಯಶಸ್ಸು ಸಾಧಿಸಿದ್ದಾನೆ.

Advertisement

ಮೂಲತ ಗದಗ ಜಿಲ್ಲೆ ಮುಂಡರಗಿ ತಾಲೂಕು ಕೊರ್ಲಹಳ್ಳಿ ಗ್ರಾಮದ ಚಂದ್ರಶೇಖರ ನಾಗಪ್ಪ ಮಜ್ಜಗಿಯೇ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿದ ಯುವ ರೈತನಾಗಿದ್ದಾನೆ. ಮೊದಮೊದಲು ಎಲ್ಲರಂತೆ ಸಾಂಪ್ರದಾಯಿಕ ಕೃಷಿ ಮಾಡ್ತಿದ್ದ ಚಂದ್ರಶೇಖರ ಮಜ್ಜಗಿ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗೋದಿಲ್ಲ ಅನ್ನೋದನ್ನ ಮನಗಂಡು ಬೀಜೊತ್ಪಾದನೆ, ತರಕಾರಿ ಮತ್ತು ಮಿಶ್ರ ಕೃಷಿ ಪಧ್ಧತಿಯತ್ತ ಮುಖ ಮಾಡಿದ್ರು.

ಆ ಮೂಲಕ ಯಶಸ್ಸು ಸಾಧಿಸಿದ್ದಾನೆ. ಕುಂಬಳಕಾಯಿ, ಹಾಗಲಕಾಯಿ, ಬೆಂಡೆ ಟೊಮ್ಯಾಟೋ, ಕಲ್ಲಂಗಡಿ ಇನ್ನೀತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೊರ ರಾಜ್ಯಗಳಿಗೆ ಕಳಿಸೋ ಮೂಲಕ ಉತ್ತಮ ಲಾಭ ಪಡೀತಿದ್ದಾರೆ. ಆ ಮೂಲಕ ಕೃಷಿ, ತೋಟಗಾರಿಕೆಯನ್ನ ನಿರಂತರ ಆದಾಯದ ಮೂಲವಾಗಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here