ವಿಘ್ನ ನಿವಾರಕನಿಗೆ ಅದ್ಧೂರಿ ವಿದಾಯ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ವಿವಿಧ ಬಡವಾಣೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಘ್ನ ನಿವಾರಕನಿಗೆ ರವಿವಾರ ಭಕ್ತರು ವಿದಾಯ ಹೇಳಿದರು.

Advertisement

ರೋಣ ಪೊಲೀಸ್ ಠಾಣೆ, ಸಾರಿಗೆ ಇಲಾಖೆ, ರಾಜೀವಗಾಂಧಿ ಮೆಡಿಕಲ್ ಕಾಲೇಜು ಸೇರಿದಂತೆ ಸಾರ್ವಜನಿಕ ಗಣಪತಿ ಉತ್ಸವ ಸಮಿತಿಗಳ ವಿಸರ್ಜನಾ ಮೇರವಣಿಗೆ ಸಡಗರದಿಂದ ನಡೆಯಿತು. ಪೊಲೀಸ್ ಇಲಾಖೆಯವರು ಮಧ್ಯಾಹ್ನವೇ ಗಣೇಶ ವಿಸರ್ಜನೆ ಕಾರ್ಯವನ್ನು ನೆರವೇರಿಸಿ ತಮ್ಮ ಕರ್ತವ್ಯಕ್ಕೆ ಮರಳಿದರು.

ಈ ಬಾರಿ ಡಿಜೆಗೆ ಅವಕಾಶ ನೀಡದ ಪ್ರಯುಕ್ತ ಸ್ಥಳೀಯ ಕಲಾವಿದರಿಗೆ ಹಾಗೂ ವಾದ್ಯ ಮೇಳಗಳಿಗೆ ಹೆಚ್ಚಿನ ಅವಕಾಶ ದೊರಕ್ಕಿತ್ತು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಹ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿಂದ ವಿದಾಯ ಹೇಳಿದರು.


Spread the love

LEAVE A REPLY

Please enter your comment!
Please enter your name here